
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತೀಯ ಸೇನಾಪಡೆಯಲ್ಲಿ ಮಹಿಳಾ ಸಿಬ್ಬಂದಿ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
”ಬಡ್ತಿ ವಿಚಾರದಲ್ಲಿ ಭಾರತೀಯ ಸೇನೆ ಮಹಿಳಾ ಅಧಿಕಾರಿಗಳಿಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ,” ಎಂದು ಭಾವಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಯುದ್ಧ ಮತ್ತು ಕಮಾಂಡಿಂಗ್ ಕಾರ್ಯಗಳಿಗಾಗಿ ತಮಗಿಂತ ಕಿರಿಯ ಪುರುಷ ಅಧಿಕಾರಿಗಳನ್ನು ಪರಿಗಣಿಸಲಾಗುತ್ತಿದೆ ಎಂದು 34 ಮಹಿಳಾ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ “ನೀವು ನಿಮ್ಮ ಮನೆಯನ್ನು ಕ್ರಮಬದ್ಧವಾಗಿ ಹೊಂದಿಸುವುದು ಉತ್ತಮ. ನೀವು ಅವರಿಗಾಗಿ ಏನು ಮಾಡುತ್ತಿದ್ದೀರಿ ಎಂದು ನಮಗೆ ತಿಳಿಸಿ,” ಎಂದು ಸೇನೆಗೆ ಹೇಳಿದೆ.
ಗಡಿ ಕಿಚ್ಚು: ಡಿ.14ರಂದು ಕರ್ನಾಟಕ- ಮಹಾರಾಷ್ಟ್ರ ಸಿಎಂಗಳೊಂದಿಗೆ ಅಮಿತ್ ಶಾ ಚರ್ಚೆ