*ಬಿಗ್‌ಬಾಸ್ ಸೀಸನ್ 11 ಗೆದ್ದ ಹನಮಂತು: ಹಣ ಸಿಕ್ಕಿದ್ದೇಷ್ಟು..?*
ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ ಹಳ್ಳಿ ಪ್ರತಿಭೆ ಹನುಮಂತ ಇದೀಗ ಬಿಗ್ ಬಾಸ್ ಸೀಸನ್ 11 ರ ಕಪ್ಪ್ ಗೆದ್ದಿದ್ದಾರೆ.
ಹಳ್ಳಿ ಪ್ರತಿಭೆ ಹನಮಂತು ಬಿಗ್‌ಬಾಸ್ ಮನೆಗೆ ಬಂದ ದಿನದಿಂದಲೂ ಹನುಮಂತನ ಪರ ಕನ್ನಡಿಗರು ನಿಂತಿದ್ದರು. ಅಂತಿಮವಾಗಿ ಹನುಮಂತ ಅವರಿಗೆ 5,23,89,318 ಮತಗಳು ಬಿದ್ದಿದ್ದರೆ ರನ್ನರ್ ಅಪ್ ತ್ರಿವಿಕ್ರಮ್ ಅವರಿಗೆ 2,53,12,518 ಮತಗಳು ಬಿದ್ದಿದ್ದವು. ಈ ಮೂಲಕ ಭರ್ಜರಿಯಾಗಿ ಬಿಗ್‌ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಕೂಡ ಗೆದ್ದಿದ್ದಾರೆ ಹನುಮಂತ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ 50 ಲಕ್ಷ ರೂಪಾಯಿ ಗೆದ್ದಿದ್ದರೂ ಅವರ ಕೈಗೆ ಸಂಪೂರ್ಣ ಹಣ ಸಿಗುವುದಿಲ್ಲ. ಬಹುಮಾನ ಮೊತ್ತಕ್ಕೆ ಕೇಂದ್ರ ಸರ್ಕಾರ ಬರೋಬ್ಬರಿ ಶೇ. 30 ರಷ್ಟು ಟ್ಯಾಕ್ಸ್ ಹಾಕುತ್ತದೆ. ಹೀಗಾಗಿ ಹನುಮಂತ 50 ಲಕ್ಷ ರೂಪಾಯಿ ಗೆದ್ದಿದ್ದರೂ ಅದರಲ್ಲಿ ಕೈಗೆ ಸಿಗುವುದು 35 ಲಕ್ಷ ರೂಪಾಯಿ ಮಾತ್ರ. ಇನ್ನುಳಿದ 15 ಲಕ್ಷ ರೂ. ಟ್ಯಾಕ್ಸ್ ರೂಪದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸ ಸೇರಲಿದೆ.
ಬಿಗ್‌ಬಾಸ್ ಗೆದ್ದ ನಂತರ ಮಾತನಾಡಿದ ಹನುಮಂತ, ದೇವರಾಣೆ ನಾನು ಗೆಲ್ಲುತ್ತೇನೆ ಅಂತ ಬಿಗ್‌ಬಾಸ್‌ಗೆ ಬಂದಿರಲಿಲ್ಲ. ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ ಎಂದಿದ್ದಾರೆ. ಹನುಮಂತ ಗೆದ್ದ ಹಿನ್ನೆಲೆ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಕೂಡ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಮೂಲದ ಸ್ಪರ್ಧಿಗೆ ಬಿಗ್‌ಬಾಸ್ ಕಿರೀಟ ಒಲಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ