Belagavi NewsBelgaum News
*ಹರೀಶ ಬೆಂಡಿಗೇರಿಗೆ ಪಿಎಚ್.ಡಿ*

ಪ್ರಗತಿವಾಹಿನಿ ಸುದ್ದಿ;
ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಅಯ್ ಟಿ ) ಬೆಳಗಾವಿಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ನಲ್ಲಿ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ ಬೆಂಡಿಗೇರಿ ಅವರಿಗೆ ಪಿಎಚ್ ಡಿ ನೀಡಲಾಗಿದೆ.
ಅಂಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ವಿಜಯ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಅಂಡ್ ಡೆವಲಪ್ಮೆಂಟ್ ಆಫ್ ವೆರಿಯಸ್ ಸೆನ್ಸರ್ಸ ಬೇಸ್ಡ್ ಆನ್ ಫೈಬರ್ ಓಪ್ಟಿಕ್ ಟೆಕ್ನಾಲಜಿ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿ ಟಿ ಯು ಪಿಎಚ್. ಡಿ. ನೀಡಿದೆ.




