ಪ್ರಗತಿವಾಹಿನಿ ಸುದ್ದಿ, ಸವದತ್ತಿ : ಸವದತ್ತಿಯ ಹರ್ಷ ಸಕ್ಕರೆ ಕಾರ್ಖಾನೆಯ 2024-2025 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಹಾಗೂ ಬಾಯ್ಲರ್ ಪ್ರದೀಪನ ಸಮಾರಂಭಕ್ಕೆ ಹೂಲಿ ಸಾಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2023-2024 ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಪೂರೈಕೆ ಮಾಡಿದ 11 ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕಾರ್ಖಾನೆ ರೈತರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು, ಈ ವರ್ಷ ಕೂಡ ಅತೀ ಹೆಚ್ಚು ಕಬ್ಬು ನುರಿಸುವ ವಿಶ್ವಾಸವಿದೆ. ಸಹಕಾರ ನೀಡುತ್ತಿರುವ ಎಲ್ಲರಿಗೂ ಹಂಗಾಮು ಆರಂಭದ ಸಂದರ್ಭದಲ್ಲಿ ಗೌರವಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಕಾರ್ಖಾನೆಯ ಅಧ್ಯಕ್ಷೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಸಂದೇಶ ಕಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಿರಿಜಾ ಹಟ್ಟಿಹೊಳಿ, ಭಾರತಿ ಕಲ್ಲೂರ್, ಬಾಬಣ್ಣ ಕಲ್ಲೂರ್, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಸದಾಶಿವ್ ತೋರಾಥ್, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ಎನ್. ಎಮ್. ಪಾಟೀಲ, ಎಥೆನಾಲ್ ಘಟಕದ ವ್ಯವಸ್ಥಾಪಕ ಸಾಂಬ್ರೇಕರ್, ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಚೌಕಿಮಠ್, ಕಾರ್ಖಾನೆಯ ಎಲ್ಲ ವಿಭಾಗದ ಸಿಬ್ಬಂದಿ, ಬೈಲಹೊಂಗಲ, ಸವದತ್ತಿ, ಕಿತ್ತೂರು ಹಾಗೂ ಧಾರವಾಡ ಭಾಗದ ರೈತ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ