Kannada NewsKarnataka NewsLatest
*ಹೃದಯಾಘಾತ; ಪೊಲೀಸ್ ಕಾನ್ಸ್ ಟೇಬಲ್ ಸಾವು*

ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಹೃದಯಾಘಾತಕ್ಕೆ ಮತ್ತೋರ್ವ ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದಾರೆ. ಗೋಗಿ ಠಾಣೆಯ ಕಾನ್ಸ್ ಟೇಬಲ್ ಹೃದಯಾಘಾತದಿಂದಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದೇವೀಂದ್ರಪ್ಪ (40) ಮೃತ ಕಾನ್ಸ್ ಟೇಬಲ್. ದೇವೀಂದ್ರಪ್ಪ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ದೇವೀಂದ್ರ ಜೂನ್ ನಿಂದ ರಜೆಯಲ್ಲಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈ ಹೃದಯಾಘಾತದಿಂದ ಅವರುಇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.




