LatestUncategorized

ಗುಡುಗು ಸಹಿತ ಆಲಿಕಲ್ಲು ಮಳೆ; ಅತ್ತ ಜನಸಂಕಲ್ಪ ಸಮಾವೇಶದಲ್ಲಿ ತಲೆ ಮೇಲೆ ಕುರ್ಚಿ ಹಿಡಿದು ನಿಂತ ಜನ; ಇತ್ತ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೂ ವರುಣನ ಅಡ್ಡಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ/ಹಾವೇರಿ: ರಾಜ್ಯದ ಹಲವೆಡೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುತ್ತಿದ್ದು, ಬಿರು ಬೇಸಿಗೆ ನಡುವೆ ಆರಂಭವಾದ ವರುಣಾರ್ಭಟಕ್ಕೆ ರಾಜಕೀಯ ಪಕ್ಷಗಳ ಸಮಾವೇಶ ಸ್ಥಗಿತಗೊಂಡಿದೆ.

Home add -Advt

ಹಾವೇರಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಷಣದ ವೇಳೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಸಮಾವೇಶಕ್ಕೆ ಬಂದ ಜನರು ತಲೆ ಮೇಲೆ ಕುರ್ಚಿ ಹಿಡಿದು ನಿಂತಿದ್ದಾರೆ. ಇನ್ನು ಹಲವರು ಮಳೆಯ ಅಬ್ಬರಕ್ಕೆ ಸಮಾವೇಶದ ಸ್ಥಳದಿಂದ ಹೊರಗೊಡಿ ಬಂದಿದ್ದಾರೆ.

ಇನ್ನು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿಯೂ ಗುಡುಗು ಸಹಿತ ಆಲಿಕಲ್ಲು ಮಳೆಯಾಗುತ್ತಿದ್ದು, ಕಾಂಗ್ರೆಸ್ ಸಮಾವೇಶಕ್ಕೆ ಅಡ್ಡಿಯುಂಟಾಗಿದೆ. ಕಲಘಟಗಿಯ ಹೊರವಲಯದ ತಡಸ ಕ್ರಾಸ್ ಬಳಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಆಯೋಜಿಸಲಾಗಿತ್ತು. ಭಾರಿ ವರ್ಷಧಾರೆ, ಅಲಿಕಲ್ಲು ಮಳೆಯಿಂದಾಗಿ ಸಮಾವೇಶಕ್ಕೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.

Related Articles

Back to top button