Latest

ಖರ್ಗೆ ಪುತ್ರ ಸ್ವತಃ ನಾಲಾಯಕ್ : ದುಷ್ಯಂತಕುಮಾರ್ ಗೌತಮ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಸ್ವತಃ ನಾಲಾಯಕ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತಕುಮಾರ್ ಗೌತಮ್ ಕಿಡಿ ಕಾರಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನಾಲಾಯಕ್ ಬೇಟಾ’ ಎಂದು ಕರೆದು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ದುಶ್ಯಂತ್ ಕುಮಾರ್ ಗೌತಮ್, ಪ್ರಿಯಾಂಕ್ ಅವರೇ ‘ನಾಲಾಯಕ್’ ಎಂದು ಹೇಳಿದ್ದಾರೆ.

Home add -Advt

“ದೇಶಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರಧಾನಿಯ ವಿರುದ್ಧ ಅವರು ಇಂತಹ ಮಾತುಗಳನ್ನು ಮಾತನಾಡುತ್ತಿದ್ದಾರೆ. ಅವರ ರಕ್ತದಲ್ಲೇ ‘ನಾಲಾಯಕಿ’ ಇದ್ದಂತೆ ತೋರುತ್ತಿದೆ. ಆದ್ದರಿಂದ ತಂದೆ ಮತ್ತು ಮಗ ಇಬ್ಬರೂ ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ” ಎಂದು ಅವರು ಹೇಳಿದರು.

“ಮೋದಿಯವರ ತಾಯಿ ಕೂಡ ಒಬ್ಬ ಪ್ರಧಾನಿಯ ತಾಯಿಯಾದರೂ ಸರಳ ಜೀವನ ನಡೆಸುತ್ತಿದ್ದಾರೆ. ಮೋದಿಯವರು ತಮ್ಮ ಎಲ್ಲ ಆದಾಯವನ್ನೂ ಪರಮಾರ್ಥಕ್ಕೆ ವಿನಿಯೋಗಿಸುತ್ತಿದ್ದಾರೆ. ಸರಕಾರದಿಂದ ಒಂದು ಪೈಸೆ ಕೂಡ ಪಡೆಯದ ಅವರಂಥ ವ್ಯಕ್ತಿಯ ವಿರುದ್ಧ ಇಂಥ ಭಾಷೆಯ ಪ್ರಯೋಗ ಸರಿಯಲ್ಲ” ಎಂದು ದುಷ್ಯಂತಕುಮಾರ್ ತಿರುಗೇಟು ನೀಡಿದ್ದಾರೆ.

“ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಇಂಥದ್ದೇ ಹೊಲಸು ಭಾಷೆಗಳನ್ನು ಉಪಯೋಗಿಸುತ್ತಿದ್ದು ಅವರನ್ನು ಓಲೈಸಲು ಈ ಪರಿಯ ಭಾಷೆಗಳನ್ನು ಬಳಸುತ್ತಿದ್ದಾರೆಂದು ಎನಿಸುತ್ತದೆ ಎಂದು ದುಷ್ಯಂತಕುಮಾರ್ ಹೇಳಿದ್ದಾರೆ.

https://pragati.taskdun.com/election-commission-ordered-to-keep-brooms-out-of-polling-booths-48-hours-before/

https://pragati.taskdun.com/modi-has-the-power-to-make-congress-party-non-existent-in-this-country-union-minister-athawale/
https://pragati.taskdun.com/shashikala-jollenippanicampaign/

Related Articles

Back to top button