LatestUncategorized

*ಏಪ್ರಿಲ್ 24ರಿಂದ ಹೈಕೋರ್ಟ್ ಗೆ ಬೇಸಿಗೆ ರಜೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಏಪ್ರಿಲ್ 24ರಿಂದ ಮೇ 20ರವರೆಗೆ ಹೈಕೋರ್ಟ್ ಗೆ ಬೇಸಿಗೆ ರಜೆ ಆರಂಭವಾಗಲಿದೆ.

ಹೈಕೋರ್ಟ್ ಗೆ ರಜೆ ಹಿನ್ನೆಲೆಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರ್ಗಿ ವಿಭಾಗೀಯ ಹಾಗೂ ಏಕಸದಸ್ಯ ನ್ಯಾಯಮೂರ್ತಿಗಳನ್ನೊಳಗೊಂಡ ರಜಾಕಾಲೀನ ಪೀಠ ರಚಿಸಲಾಗಿದೆ.

ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ತಡೆಯಾಜ್ಞೆ, ಮಧ್ಯಂತರ ಆದೇಶ, ತಾತ್ಕಾಲಿಕ ಪ್ರತಿಬಂಧಕ ಆದೇಶದಂತಹ ಪ್ರಕರಣಗಳ ವಿಚಾರಣೆ ಮಾತ್ರ ರಜಾಕಾಲೀನ ಪೀಠದಲ್ಲಿ ನಡೆಯಲಿದೆ.

ಇನ್ನು ಇ ಫೈಲಿಂಗ್ ಪೋರ್ಟಲ್ ಮೂಲಕ ಮಾತ್ರ ಇ ಫೈಲಿಂಗ್ ಮಾಡಬಹುದಾಗಿದೆ ಎಂದು ರಿಜಿಸ್ಟ್ರಾರ್ ಎಂ.ಚಂದ್ರಶೇಖರ ರೆಡ್ಡಿ ಅಧಿಸೂಚನೆ ಹೊರಡಿಸಿದ್ದಾರೆ.

Home add -Advt
https://pragati.taskdun.com/vidhanasabha-electionbelagavivotersdc-nitesh-patil/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button