Belagavi NewsBelgaum NewsKannada NewsKarnataka NewsLatest

*ಬೆಳಗಾವಿಯ ಹಿರಿಯ ಲೇಖಕ, ಕನ್ನಡ ಹೋರಾಟಗಾರ ಬಿ.ಎಸ್ ಗವಿಮಠಗೆ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರದ ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರವು ನೀಡುವ ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿ ಗೆ ಬೆಳಗಾವಿಯ ಹಿರಿಯ ಲೇಖಕ ಹಾಗೂ ಕನ್ನಡ ಹೋರಾಟಗಾರ ಬಿ ಎಸ್ ಗವಿಮಠ ಭಾಜನರಾಗಿದ್ದಾರೆ.

ನಾಡೋಜ ಬರಗೂರು ರಾಮಚಂದ್ರಪ್ಪ ಹಾಗೂ ಕವಿ ಪತ್ರಕರ್ತ ಡಾ ಸರಜೂ ಕಾಟ್ಕರ್ ಅವರ ಆಯ್ಕೆ ಸಮಿತಿಯು ಬಿ ಎಸ್ ಗವಿಮಠ ಅವರ ಹೆಸರನ್ನು ಈ ಪ್ರಶಸ್ತಿ ಗೆ ಅಂತಿಮಗೊಳಿಸಿತು.

Home add -Advt

ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಸನ್ಮಾನ ಒಳಗೊಂಡಿದೆ. ಆಯ್ಕೆ ಸಮಿತಿಯು ಈ ಮೊತ್ತವನ್ನು ಮೂರು ಲಕ್ಷ ರೂಪಾಯಿ ಗೆ ಏರಿಸಬೇಕೆಂದು ಮುಖ್ಯ ಮಂತ್ರಿ ಅವರಿಗೆ ಶಿಫಾರಸು ಮಾಡಿದೆ. ಮುಖ್ಯ ಮಂತ್ರಿಯವರು ಅದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಪ್ರಶಸ್ತಿಯನ್ನು ಮುಖ್ಯಮಂತ್ರಿ ಯವರು ಶೀಘ್ರದಲ್ಲಿ ಬೆಂಗಳೂರಿನಲ್ಲಿ ವಿತರಿಸಲಿದ್ದಾರೆ.

Related Articles

Back to top button