ರಾಮನಾಥಿ (ಗೋವಾ) –
“ಹಿಂದೂ ರಾಷ್ಟ್ರ-ಸ್ಥಾಪನೆಯ ದೃಷ್ಟಿಯಿಂದ ಆವಶ್ಯಕ ಕೌಶಲ್ಯದ ವಿಕಾಸ, ಕ್ಷಮತೆಗಳ ವಿಕಾಸ ಮತ್ತು ಇವುಗಳೊಂದಿಗೆ ಸಾಧಕತ್ವದ ವಿಕಾಸವಾಗಲು ಪ್ರಯತ್ನಿಸಬೇಕು. ತ್ಯಾಗದಿಂದಲೇ ದೊಡ್ಡದೊಡ್ಡ ಭವ್ಯದಿವ್ಯ ಕಾರ್ಯಗಳಾಗುತ್ತವೆ ಮತ್ತು ಸನಾತನ ಧರ್ಮದ ಅಂತಿಮ ಪುರುಷಾರ್ಥ ಅಂದರೆ ಮೋಕ್ಷಪ್ರಾಪ್ತಿ ಇದಕ್ಕಾಗಿಯೂ ತ್ಯಾಗ ಮಾಡಬೇಕಾಗುತ್ತದೆ. ನಾವು ಭಗವದ್ಭಕ್ತರಾದರೆ ಭವಿಷ್ಯದಲ್ಲಿನ ಭೀಕರ ಸಂಕ್ರಮಣ ಕಾಲದಲ್ಲಿ ಈಶ್ವರನು ನಮ್ಮ ರಕ್ಷಣೆ ಮಾಡುವನು”, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಹೇಳಿದರು.
ಅವರು ಜೂನ್ ೮ ರಂದು ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಅಂತರ್ಗತ ಆಯೋಜಿಸಲಾದ ‘ಹಿಂದೂ ರಾಷ್ಟ್ರ ಸಂಘಟಕ ತರಬೇತಿ ಮತ್ತು ಅಧಿವೇಶನ’ದ ಸಮಾರೋಪಭಾಗದಲ್ಲಿ ಮಾತನಾಡುತ್ತಿದ್ದರು.
ಉತ್ಸಾಹಪೂರ್ಣ ವಾತಾವರಣದಲ್ಲಿ ನೆರವೇರಿದ ಈ ಅಧಿವೇಶನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ೨೫೦ ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಪಾಲ್ಗೊಂಡಿದ್ದರು.
ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಸದ್ಗುರು (ಸೌ.) ಬಿಂದಾ ಸಿಂಗಬಾಳರು ಈ ಸಮಾರೋಪ ಸತ್ರದಲ್ಲಿ ಮಾತನಾಡುತ್ತಾ, “ಯಥಾ ಶುಭಮ್ ತಥಾ ಕುರುಮ್ |’, ಅಂದರೆ ‘ಯಾವುದು ಶುಭವಿದೆ ಅದನ್ನು ಮಾಡಬೇಕು’, ಎಂಬ ಧರ್ಮವಚನವಿದೆ. ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯ ಮತ್ತು ಸಾಧನೆ ಇವೆರಡೂ ವಿಷಯಗಳು ಶುಭವಾಗಿವೆ. ಹಾಗಾಗಿ ಅದನ್ನು ಹೆಚ್ಚೆಚ್ಚು ಮಾಡಲು ಪ್ರಯತ್ನಿಸಿ !”, ಎಂದರು.
ಅಧಿವೇಶನದಲ್ಲಿ ಪಾಲ್ಗೊಂಡ ಧರ್ಮಪ್ರೇಮಿಗಳಿಗೆ ಮಾರ್ಗರ್ಶನ ಮಾಡುವಾಗ ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಸದ್ಗುರು ನಂದಕುಮಾರ ಜಾಧವರವರು ಮಾತನಾಡುತ್ತಾ, “ಧರ್ಮಕಾರ್ಯವನ್ನು ಭಾವನೆಗೊಳಗಾಗಿ ಮಾಡದೇ ಸದ್‌ಸದ್ವಿವೇಕಬುದ್ಧಿಯಿಂದ ಮತ್ತು ಸಾಧನೆಯ ಅಧಿಷ್ಠಾನವನ್ನಿಟ್ಟು ಮಾಡಬೇಕು”, ಎಂದರು.
ಈ ಅವಧಿಯಲ್ಲಿ ನೆರವೇರಿದ ಈ ಅಧಿವೇಶನದಲ್ಲಿ ‘ಸಮಯದ ಆಯೋಜನೆಯನ್ನು ಹೇಗೆ ಮಾಡಬೇಕು ?’, ‘ನಿರ್ಣಯಕ್ಷಮತೆಯನ್ನು ಹೇಗೆ ಹೆಚ್ಚಿಸಬೇಕು ?’, ‘ಸಮರ್ಪಣಾ ಭಾವದಿಂದ ಧರ್ಮಕಾರ್ಯವನ್ನು ಹೇಗೆ ಮಾಡಬೇಕು ?’, ‘ಹಿಂದೂ ರಾಷ್ಟ್ರದ ಬಗ್ಗೆ ಜಾಗೃತಿಯನ್ನು ಮೂಡಿಸಲು ಯಾವರೀತಿಯ ಉಪಕ್ರಮಗಳನ್ನು ಆಯೋಜಿಸಬೇಕು ?’, ಇದರೊಂದಿಗೆ ‘ಧರ್ಮಕಾರ್ಯವನ್ನು ಮಾಡುವಾಗ ಸಾಧನೆಯ ಅಧಿಷ್ಠಾನದ ಮಹತ್ವ’ ಇತ್ಯಾದಿ ವಿಷಯಗಳ ಮೇಲೆ ಮಾರ್ಗದರ್ಶನವನ್ನು ಮಾಡಲಾಯಿತು.
ಹಿಂದೂ ರಾಷ್ಟ್ರದ ವಿಷಯದ ಜಾಗೃತಿಯ ಬಗೆಗಿನ ಅಂಶವನ್ನು ಪ್ರಭಾವಶಾಲಿಯಾಗಿ ಮಂಡಿಸುವ ಅಭ್ಯಾಸ ಆಗಬೇಕು, ಅದಕ್ಕಾಗಿ ಪ್ರಾಯೋಗಿಕ ಭಾಗವನ್ನೂ ತೆಗೆದುಕೊಳ್ಳಲಾಯಿತು. ಪ್ರಗತಿಪರರು ಹಿಂದೂ ಧರ್ಮವನ್ನು ಟೀಕಿಸಿ ಹಿಂದೂಗಳ ಬುದ್ಧಿಭ್ರಮಣ ಮಾಡಲು ಪ್ರಯತ್ನಿಸುತ್ತಾರೆ, ಅದೇರೀತಿ ಹಿಂದೂ ರಾಷ್ಟ್ರದ ಬಗ್ಗೆಯೂ ಬೇಕಾಬಿಟ್ಟಿ ಆಕ್ಷೇಪವೆತ್ತುತ್ತಾರೆ. ಈ ಹಿನ್ನಲೆಯಲ್ಲಿ ಹಿಂದೂ ರಾಷ್ಟ್ರದ ಮೂಲಭೂತ ಸಂಕಲ್ಪನೆ, ಅದೇರೀತಿ ಅದರ ಮೇಲೆ ತೆಗೆದುಕೊಳ್ಳುವ ಆಕ್ಷೇಪ ಮತ್ತು ಅದರ ಖಂಡನೆ ಇದರ ಬಗ್ಗೆಯೂ ಮಾರ್ಗದರ್ಶನ ಮಾಡಲಾಯಿತು. ಧರ್ಮಪ್ರೇಮಿಗಳು ಧರ್ಮಕಾರ್ಯವನ್ನು ಮಾಡುತ್ತಿರುವಾಗ ಬರುವಂತಹ ಸಮಸ್ಯೆಗಳನ್ನು ಮನಮುಕ್ತವಾಗಿ ಮಂಡಿಸಿದರು. ಅದಕ್ಕೆ ಯಾವ ಉಪಾಯೋಜನೆಯನ್ನು ಮಾಡಬೇಕು, ಇದರ ಬಗ್ಗೆಯೂ ಮನವರಿಕೆಯನ್ನು ಮಾಡಿಕೊಡಲಾಯಿತು. ಈ ಮೂಲಕ ಬೇರೆ ಬೇರೆ ಪ್ರಾಂತಗಳಲ್ಲಿ ಧರ್ಮರಕ್ಷಣೆಯ ಕಾರ್ಯವನ್ನು ಯಾವ ರೀತಿ ಮಾಡಲಾಗುತ್ತಿದೆ, ಅದರ ಬಗ್ಗೆ ಧರ್ಮಪ್ರೇಮಿಗಳಿಗೆ ಕಲಿಯಲು ಸಿಕ್ಕಿತು. ಇದರಲ್ಲಿ ಭಾಗವಹಿಸಿದ ಧರ್ಮಪ್ರೇಮಿಗಳು ‘ಜಯತು ಜಯತು ಹಿಂದೂರಾಷ್ಟ್ರಮ್ |’ ಘೋಷಣೆಯಿಂದ ಜನಕಲ್ಯಾಣಕಾರಿ ಹಿಂದೂ ರಾಷ್ಟ್ರಕ್ಕಾಗಿ ಶ್ರಮಿಸಿ ಕಾರ್ಯವನ್ನು ಮಾಡಲು ನಿರ್ಧರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ