
ಪ್ರಗತಿವಾಹಿನಿ ಸುದ್ದಿ: ಹೀರೆಬಾಗೇವಾಡಿ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಎರಡು ಲಾರಿ, ಎರಡು ಬಸ್ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.
ಭಾರಿ ಮಳೆಯಿಂದಾಗಿ ಹೀರೇಬಾಗೆವಾಡಿ ಬಳಿಯ ಬಡೆಕೊಳ್ಳ ಘಾಟ್ ನಲ್ಲಿ ಅಪಘಾತ ಸಂಭವಿಸಿದ್ದು, ಲಾರಿಯೊಂದು ಬಸ್ ನ ಹಿಂಬದಿ ಡಿಕ್ಕಿ ಹೊಡೆದಿದೆ. ಇದೇ ವೇಳೆ ಮತ್ತೊಂದು ಬಸ್ ದ್ವಿಚಕ್ರ ವಾಹನದ ನಡಿವೆ ಅಪಘಾತ ಸಂಭವಿಸಿದೆ. ಮತ್ತೊಂದು ಕಂಟೆನರ್ ಕೂಡ ಪಲ್ಟಿಯಾಗಿದೆ.
ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.