Belagavi NewsBelgaum NewsKannada NewsKarnataka News

*ಘಟಪ್ರಭಾ ನದಿಗೆ ಬಿದ್ದ ಬೈಕ್: ದಂಪತಿ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೈಕ್‌ ಮೇಲೆ ದಂಪತಿ ಹೋಗುತ್ತಿದ್ದಾಗ ಸ್ಕಿಡ್ ಆಗಿ ನದಿಗೆ ಬಿದ್ದು ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗಣಿಹಾಳ ಗ್ರಾಮದಲ್ಲಿ ಇಂದು ಸಂಭವಿಸಿದೆ.

ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆದ ಪರಿಣಾಮ ಘಟಪ್ರಭಾ ನದಿಗೆ ಬಿದ್ದಿದೆ. ಈ ದುರಂತದಲ್ಲಿ ಸುರೇಶ್ ಬಡಿಗೇರ ಮತ್ತು ಪತ್ನಿ ಜಯಶ್ರೀ ಬಡಿಗೇರ ಎಂಬುವ ದಂಪತಿ ಸಾವನ್ನಪ್ಪಿದ್ದಾರೆ.

Home add -Advt

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಜಯಶ್ರೀ ಎಂಬುವವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಇನ್ನು ಸುರೇಶ್ ಬಡಿಗೇರ ಅವರ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.

Related Articles

Back to top button