Kannada NewsKarnataka NewsLatest

*ಹಿಂದೂ ಸಮಾಜ- ಧರ್ಮ ರಕ್ಷಣೆಗೆ ಶಿವಾಜಿ ಹೋರಾಟ ಯುವ ಜನತೆಗೆ ಮಾದರಿ; ಸಚಿವ ಪ್ರಹ್ಲಾದ ಜೋಶಿ ಅಭಿಮತ*

ಹುಬ್ಬಳ್ಳಿ ಮರಾಠಾ ಗಲ್ಲಿಯಲ್ಲಿ ಛತ್ರಪತಿ ಶಿವಾಜಿ ಜಯಂತ್ಯುತ್ಸವ

Home add -Advt

ಪ್ರಗತಿವಾಹಿನಿ ಸುದ್ದಿ: ಹಿಂದೂ ಸಮಾಜ ಮತ್ತು ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಮಾಡಿದ ಹೋರಾಟ ಎಲ್ಲರಿಗೂ ಮಾದರಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ಇಂದು ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಾಜಿ ಎಂಬ ಹೆಸರೇ ಇಂದಿನ ಯುವ ಜನತೆಗೆ ಆದರ್ಶಪ್ರಾಯ ಎಂದ ಸಚಿವರು, ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಐತಿಹಾಸಿಕ ವ್ಯಕ್ತಿತ್ವಗಳಲ್ಲಿ ಶಿವಾಜಿ ಮಹಾರಾಜರೂ ಒಬ್ಬರು ಎಂದು ಪ್ರತಿಪಾದಿಸಿದರು.

ಛತ್ರಪತಿ ಶಿವಾಜಿ ಅವರ ತ್ಯಾಗ-ಬಲಿದಾನ ಮತ್ತು ಹಿಂದೂ ಸಮಾಜ, ಧರ್ಮದ ರಕ್ಷಣೆಗಾಗಿ ಮಾಡಿದ ಹೋರಾಟಗಳು ಸ್ಮರಣೀಯವಾಗಿವೆ. ಅಲ್ಲದೇ, ಇಂದಿನ ದಿನಮಾನದಲ್ಲಿ ಸರ್ವರಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್ ಹಾಗು ಮರಾಠಾ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Related Articles

Back to top button