Latest

ಜೈನ್ ಕಾಲೇಜಿನಲ್ಲಿ ಮಾ.8, 9ರಂದು ತಾಂತ್ರಿಕ, ವ್ಯವಸ್ಥಾಪನ ಮೇಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಗರದ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾ.8 ಹಾಗೂ 9ರಂದು ತಾಂತ್ರಿಕ, ಸಾಂಸ್ಕೃತಿಕ ಮೇಳ ’ಓಡಿಸ್ಸಿ 19’ ಹಾಗೂ ವ್ಯವಸ್ಥಾಪನ ಮೇಳ ‘ಅಧ್ಯಾಯ 19’ ಹಮ್ಮಿಕೊಳ್ಳಲಾಗಿದೆ.

ಬಾಬ್ ದಿ ಬಿಲ್ಡರ್, ಮ್ಯಾಡ್ ರೇಸ್, ಮಿಸ್ಟರಿ ಕೋಡ್, ಲ್ಯಾನ್ ಗೇಮಿಂಗ್, ರಾಯಲ್ ಫಿಯೆಸ್ಟಾ, ರೊಬೊಮೇನಿಯಾ, ಅಭಿಗ್ಯಾನ, ಚಾಣಕ್ಯ, ಸೃಷ್ಟಿ, ಕಟ್ ಥ್ರೋಟ್, ಫ್ಯಾಷನ್ ಫಿಯೆಸ್ಟಾ ಮುಂತಾದ ಸ್ಪರ್ಧೆಗಳು ನಡೆಯಲಿವೆ.

ಮಾ. 8ರಂದು ಬೆಳಗ್ಗೆ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಬೆಂಗಳೂರಿನ ಟಿಸಿಎಸ್ ಆರ್‌ಎಂಜಿ ಗ್ಲೋಬಲ್ ಹೆಡ್ ಇ.ಎಸ್. ಚಕ್ರವರ್ತಿ ಮೇಳವನ್ನುಉದ್ಘಾಟಿಸಲಿದ್ದಾರೆ. ಟಿಸಿಎಸ್ ಅಕಾಡೆಮಿಕ್ ರಿಲೇಷನಶಿಪ್ ಮ್ಯಾನೇಜರ್ ಶ್ರೀನಿವಾಸ ರಾಮಾನುಜನ್, ಜೆಜಿಐ ನಿರ್ದೇಶಕ ಪ್ರೊ.ಆರ್.ಜಿ. ಧಾರವಾಡಕರ, ಪ್ರಾಚಾರ್ಯ ಡಾ.ಕೆ.ಜಿ. ವಿಶ್ವನಾಥ, ಸಂಚಾಲಕ ಶಿರೀಶ ಕೆರೂರ ಉಪಸ್ಥಿತರಿರಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button