Belagavi NewsBelgaum NewsKannada NewsKarnataka News

*ಬೈಕ್ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಎಪಿಎಂಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಣಗಾರಗಲ್ಲಿ, ಸದ್ಯ ಬೆಳಗಾವಿಯ ನ್ಯೂವೈಭವ ನಗರದಲ್ಲಿ ವಾಸವಾಗಿದ್ದ ಆರೋಪಿ ಸಂತೋಷ ಬಸವರಾಜ ಅಂದಾನಿ (45) ಎಂಬಾತನನ್ನು ಬಂಧಿಸಲಾಗಿದೆ. ಈತ ನಗರದ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಹಾಗೂ ನಗರದ ಇತರೆ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ.

Home add -Advt

ಬಂಧಿತನಿಂದ ಸುಮಾರು 2,65,000 ರೂ ಬೆಲೆಯ 2 ಹಿರೋ ಹೊಂಡಾ ಸ್ಟೆಂಡರ್ ಬೈಕ್, 3 ಹೊಂಡಾ ಆ್ಯಕ್ಟಿವಾ ಸ್ಕೂಟರಗಳು,1 ಸಿಬಿಝಡ್ ಎಕ್ಸ್‌ಟೀಮ್. 1 ಬಜಾಜ್ ಪಲ್ಸರ್, 1 ಹಿರೋ ಪ್ಯಾಶನ್ ಪ್ರೋ ಹಾಗೂ 1 ಬಜಾಜ್ ಸಿಟಿ-100 ಬೈಕ್ ಹೀಗೆ ಒಟ್ಟು 9 ಬೈಕ್ ಗಳನ್ನು ವಶಪಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಇದರಲ್ಲಿ ಜಪ್ತಿಯಾದ ಕೆಲವೊಂದು ಬೈಕ್ ಮಾಲೀಕರ ಪತ್ತೆ ಮಾಡುವ ತನಿಖೆ ಮುಂದುವರೆದಿರುತ್ತದೆ. ಈ ಪ್ರಕರಣದಲ್ಲಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ಪಿಎಸ್ ಐ ಎಸ್.ಆರ್ ಮುತ್ತತ್ತಿ , ಎಎಸ್ಐ ಎಮ್. ಎ. ಪಾಟೀಲ, ದೀಪಕ ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಹಾಗೂ ಪೊಲೀಸ್ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ರಮೇಶ ಅಕ್ಕಿ, ಮಹಾದೇವ ಖಶೀದ ಕಾರ್ಯಾಚರಣೆ ನಡೆಸಿದ್ದಾರೆ. ಇವರ ಕೆಲಸಕ್ಕೆ ಪೊಲೀಸ್ ಆಯುಕ್ತರು ಹಾಗೂ ಉಪಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

Back to top button