Kannada NewsKarnataka News

*ಸ್ನೇಹಿತನ ಜೊತೆ ಹಾಸಿಗೆ ಹಂಚಿಕೊಳ್ಳಲು ನಿರಾಕರಿಸಿದ ಪತ್ನಿಯನ್ನು ಕೊಲೆ ಮಾಡಿ ಪತಿ*

ಪ್ರಗತಿವಾಹಿನಿ ಸುದ್ದಿ: ನನಗೆ ಮಕ್ಕಳು ಆಗಲ್ಲ ಹಾಗಾಗಿ ನನ್ನ ಸ್ನೇಹಿತನ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಗೆ ಒತ್ತಾಯಿಸಿದ ಪತಿಯ ಮಾತು ನಿರಾಕರಿಸಿದಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ನಡೆದಿದೆ.

ಈ ಘಟನೆಯು ಯಾದಗಿರಿ ಜಿಲ್ಲೆಯ ಗಂಗನಾಳ ಗ್ರಾಮದಲ್ಲಿ ನಡೆದಿದೆ ಶರಣಬಸಮ್ಮ ಪತಿಯಿಂದ ಕೊಲೆಯಾದ ಮಹಿಳೆ. ಭೀಮಣ್ಣ ಕೊಲೆ ಆರೋಪಿ. ಜು. 25 ರಂದು ಪತ್ನಿಯೊಂದಿಗೆ ಗಂಗನಾಳ ಗ್ರಾಮಕ್ಕೆ ಆರೋಪಿ ಪತಿ ಬಂದಿದ್ದ. ಮಾವ-ಅತ್ತೆಯ ಮನೆಯಲ್ಲಿ ಬಾಡೂಟ ಸವೆದು ಜೋಡಿ ಮಲಗಿತ್ತು. ತಡರಾತ್ರಿ 12 ಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ನಾಟಕವಾಡಿದ್ದ. 

ನನಗೆ ಮಕ್ಕಳಾಗಲ್ಲ, ಸ್ನೇಹಿತನ ಜೊತೆಗೆ ಮಲಗು ಎಂದು ಆರೋಪಿ ತನ್ನ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಮಕ್ಕಳಾಗದಿದ್ದರೂ ಪರವಾಗಿಲ್ಲ, ಪರ ಪುರುಷನ ಸಂಗ ಮಾಡಲ್ಲ ಎಂದು ಶರಣಬಸಮ್ಮ ಹೇಳಿದ್ದಳು. ಇದರಿಂದ ಕೆರಳಿದ್ದ ಪತಿ ಭೀಮಣ್ಣ ಆಕೆಯನ್ನು ಕೊಲೆ ಮಾಡಿದ್ದಾನೆ. ಆದರೆ ಅನುಮಾನಗೊಂಡಿದ್ದ ಶಹಾಪೂರ ಪೊಲೀಸರು ಪ್ರಕರಣ ಭೇದಿಸಿದ್ದಾರೆ. 

ಬೇರೆಯವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆಂದು ಶರಣಬಸಮ್ಮ ತನ್ನ ಸಹೋದರಿಗೆ ದುಃಖ ಹೇಳಿಕೊಂಡಿದ್ದಳು. ಮರ್ಯಾದೆ ಪ್ರಶ್ನೆ, ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಸಹೋದರಿ ಬಳಿ ಹೇಳಿಕೊಂಡಿದ್ದಳು. ಶರಣಬಸಮ್ಮ ಕೊಲೆ ಬೆನ್ನಲ್ಲೇ ವಿಚಾರವನ್ನು ಆಕೆಯ ಸಹೋದರಿ ಪೊಲೀಸರಿಗೆ ತಿಳಿಸಿದ್ದಾಳೆ. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button