Karnataka News

*ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದಂತೆಯೇ ಪತ್ನಿಯನ್ನು ಕೊಚ್ಚಿ ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ರಾಜಿಸಂಧಾನಕ್ಕೆಂದು ಬಂದಿದ್ದ ಪತ್ನಿಯನ್ನು ಪೊಲೀಸ್ ಠಾಣೆ ಬಳಿಯೇ ಪತಿ ಮಹಾಶಯ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Home add -Advt

ಸೋಮವಾರಪೇಟೆ ನಿವಾಸಿ ಗಿರೀಶ್, ಪತ್ನಿಯನ್ನೇ ಕೊಂದ ಪತಿ. ವಿದ್ಯಾ ಕೊಲೆಯಾದ ಮಹಿಳೆ. ಎಂಟು ವರ್ಷಗಳ ಹಿಂದೆ ಗಿರೀಶ್ ಹಾಗೂ ವಿದ್ಯಾ ವಿವಾಹವಾಗಿತ್ತು. ಇಬ್ಬರು ಮಕ್ಕಳಿದ್ದಾರೆ. ಆದರೆ ದೊಡ್ದಮೂಡಳ್ಳಿ ನಿವಾಸಿ ಶ್ರೀನಾಥ್ ಜೊತೆ ವಿದ್ಯಾಳಿಗೆ ಅಕ್ರಮ ಸಂಬಂಧವಿತ್ತಂತೆ. ಇದೇ ಕಾರಣಕ್ಕೆ ಶ್ರೀನಾಥ್ ಜೊತೆ ಓಡಿ ಹೋಗಿದ್ದಳಂತೆ

ಈ ವಿಚಾರವಾಗಿ ಚಾಮರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ವಿದ್ಯಾ-ಶ್ರೀನಾಥ್ ಕೊಯಮತ್ತೂರ್ ಗೆ ಪರಾರಿಯಾಗಿದ್ದರು. ಅವರನ್ನು ಪೊಲೀಸ್ ಠಾಣೆಗೆ ಕರೆ ತಂದು ಪೊಲೀಸರು ಬುದ್ಧಿ ಹೇಳಿದ್ದರು. ಈ ವೇಳೆ ವಿದ್ಯಾ ಪತಿ ಗೌರೀಶ್ ಜೊತೆ ಹೋಗಲು ನಿರಾಕರಿಸಿದ್ದಾಳೆ. ಹೀಗಾಗಿ ವಿದ್ಯಾಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಮರುದಿನ ವಿದ್ಯಾ ಹಾಗೂ ಪತಿ ಗಿರೀಶ್ ನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾಗ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿದ್ದರು. ರಾಜಿಸಂಧಾನವೂ ಆಗಿತ್ತು. ಠಾಣೆಯಿಂದ ಹೊರ ಬರುತ್ತಿದಂತೆ ಗಿರೀಶ್, ಪತ್ನಿ ವಿದ್ಯಾಳನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

Related Articles

Back to top button