Karnataka News

*ಗಂಡನ ಬೊಕ್ಕತಲೆಗೆ ಪತ್ನಿಯ ಅಪಹಾಸ್ಯ; ನೊಂದ ಪತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಗಂಡನ ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಕಿರುಕುಳ ಹಿನ್ನೆಲೆಯಲ್ಲಿ ನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಪರಶಿವಮೂರ್ತಿ (32) ಆತ್ಮಹಯೆಗೆ ಶರಣಾಗಿರುವ ವ್ಯಕ್ತಿ. ಡೆತ್ ನೋಟ್ ಬರೆದಿಟ್ಟು ಪರಶಿವಮೂರ್ತಿ ಸಾವಿಗೆ ಶರಣಾಗಿದ್ದಾರೆ. ಪತ್ನಿ ಮಮತಾ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಪರಶಿವಮೂರ್ತಿ ಹಾಗೂ ಮಮತಾ ಕಳೆದ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಪರಶಿವಮೂರ್ತಿಗೆ ಮದುವೆ ಬಳಿಕ ತಲೆಕೂದಲು ಸಂಪೂರ್ಣ ಉದುರಿ ಹೋಗಿತ್ತು. ನಿಮ್ಮ ಬೊಕ್ಕತಲೆ ಹೊರಗಡೆ ಹೋದರೆ ನನಗೆ ಅವಮಾನವಾಗುತ್ತೆ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದಳಂತೆ. ಅಲ್ಲದೇ ಸುಳ್ಳು ವರದಕ್ಷಿಣೆ ಕೇಸ್ ಹಾಕಿ ಪತಿಯನ್ನು ಜೈಲುಗೂ ಕಳುಹಿಸಿದ್ದಳಂತೆ. ತಾಳಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕುತ್ತಿದ್ದಳಂತೆ. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಆಘಾಗ ಜಗಳವಾಗಿತ್ತಂತೆ.

ಹೆಂಡತಿ ಕಾಟಕ್ಕೆ ಬೇಸತ್ತ ಪರಶಿವಮೂರ್ತಿ ನೇಣಿಗೆ ಶರಣಾಗಿದ್ದಾರೆ. ಚಾಮರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button