ಬೆಳಗಾವಿಯಲ್ಲಿ ಹೈಡ್ರೋಲಿಕ್ ಡಸ್ಟ್ ಬಿನ್ ಯೋಜನೆ: ಮಾಹಿತಿ ಸಂಗ್ರಹಿಸಿದ ಪ್ರಧಾನಿ ಕಚೇರಿ; ವಿಡೀಯೋ ಸಹಿತ ವರದಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದಲ್ಲೇ ವಿನೂತನವೆನ್ನಲಾದ ಅಂಡರ್ ಗ್ರೌಂಡ್ ಹೈಡ್ರಾಲಿಕ್ ಡಸ್ಟ್ ಬಿನ್ ನ್ನು ಬೆಳಗಾವಿಯಲ್ಲಿ ಅಳವಡಿಸಲು ಶಾಸಕ ಅಭಯ ಪಾಟೀಲ ನಿರ್ಧರಿಸಿದ್ದು, ಇದಕ್ಕಾಗಿ ಯೋಜನೆ ರೂಪಿಸಿದ್ದಾರೆ.
ಯುರೋಪ್ ನಲ್ಲಿನ ತಂತ್ರಜ್ಞಾನವನ್ನು ಇಲ್ಲಿಯ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಅಳವಡಿಸಲು ನಿರ್ಧರಿಸಲಾಗಿದೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ಬೆಳಗಾವಿಯ ಎಲ್ಲ 58 ವಾರ್ಡ್ ಗಳಲ್ಲಿ ತಲಾ ಒಂದರಂತೆ ಡಸ್ಟ್ ಬಿನ್ ಅಳವಡಿಸಲಾಗುತ್ತದೆ. ಅದರ ಪರಿಣಾಮ ನೋಡಿಕೊಂಡು ನಂತರದಲ್ಲಿ ಹೆಚ್ಚಿನ ಡಸ್ಡ್ ಬಿನ್ ಅಳವಡಿಸಲಾಗುತ್ತದೆ. ಈಗ ಶಹಾಪುರದಲ್ಲಿ ಮೊದಲ ಡಸ್ಟ್ ಬಿನ್ ಅಳವಡಿಸುವ ಕಾರ್ಯ ನಡೆಯುತ್ತಿದೆ.
ಈ ಹೈಡ್ರಾಲಿಕ್ ಡಸ್ಟ್ ಬಿನ್ ನಿರ್ವಹಿಸುವ ವಾಹನದ ಬೆಲೆ 50 ಲಕ್ಷ ರೂ. ಇದ್ದು, ಪ್ರತಿ ಡಸ್ಟ್ ಬಿನ್ ಅಳವಡಿಸಲು 3 ಲಕ್ಷ ರೂ. ವೆಚ್ಚವಾಗಲಿದೆ. ಪ್ರತಿ ವಾರ್ಡ್ ಗೆ ಒಂದೊಂದು ಡಸ್ಟ್ ಬಿನ್ ಅಳವಡಿಸಲು ಸುಮಾರು ಒಂದೂವರೆ ಕೋಟಿ ರೂ. ಮತ್ತು ವಾಹನಕ್ಕೆ 50 ಲಕ್ಷ ಸೇರಿ ಆರಂಭದಲ್ಲಿ 2 ಕೋಟಿ ರೂ. ವೆಚ್ಚವಾಗುವುದು.
ಶೇ.50ರಷ್ಟು ತ್ಯಾಜ್ಯ ತುಂಬಿದ ತಕ್ಷಣ ಸಂಬಂಧಿಸಿದ ಗುತ್ತಿಗೆದಾರರಿಗೆ ಸಂದೇಶ ರವಾನೆಯಾಗುತ್ತದೆ. ಶೇ.90ರಷ್ಟು ತುಂಬಿದರೆ ಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಸದಸ್ಯರಿಗೆ ಸಂದೇಶ ಹೊಗುತ್ತದೆ. ಸಕಾಲಕ್ಕೆ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಕ್ಪಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಇಂತಹ ಯೋಜನೆ ದೇಶದ ಯಾವುದೇ ಭಾಗದಲ್ಲಿ ಇಲ್ಲ. ಬೆಳಗಾವಿಯಲ್ಲಿ ಈ ಯೋಜನೆ ರೂಪಿಸಿರುವುದನ್ನು ತಿಳಿದ ಪ್ರಧಾನಮಂತ್ರಿ ಕಾರ್ಯಾಲಯ ಇದೀಗ ಬೆಳಗಾವಿಯಿಂದ ಮಾಹಿತಿ ಸಂಗ್ರಹಿಸಿದೆ
-ಅಭಯ ಪಾಟೀಲ
ಬೆಳಗಾವಿ ಪಾಲಿಕೆ ಮಾದರಿ ಮಾಡಲು ಅಭಯ ಪಾಟೀಲ ಸೂತ್ರ
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ವೇಳೆ ನಕಲು: ಮತ್ತೊಬ್ಬ ಯುವತಿಯ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ