Latest

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಬಿಭತ್ಸ್ಯ ಘಟನೆ; ಮಗನ ಜೊತೆ ಸೇರಿ ಪತಿಯನ್ನೇ 22 ತುಂಡುಗಳನ್ನಾಗಿ ಕತ್ತರಿಸಿದ ಪತ್ನಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಬ್ಬಿಭತ್ಸ್ಯ ಘಟನೆ ಬಯಲಿಗೆ ಬಂದಿದೆ. ಶ್ರದ್ಧಾ ವಾಲ್ಕರ್ ಹತ್ಯೆ ಮಾದರಿಯಲ್ಲಿಯೇ ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದು ಹಲವು ತುಂಡುಗಳನ್ನಾಗಿ ಕತ್ತರಿಸಿದ ಘಟನೆ ನಡೆದಿದೆ.

ದೆಹಲಿಯ ಪಾಂಡವನಗರದ ಮನೆಯೊಂದರಲ್ಲಿ ಅಂಜನ್ ದಾಸ್ ಎಂಬಾತನನ್ನು ಪತ್ನಿ ಪೂನಂ ಹಾಗೂ ಮಗ ದೀಪಕ್ ಇಬ್ಬರೂ ಭಯಂಕರವಾಗಿ ಕೊಲೆಗೈದು ಬಳಿಕ ಮೃತದೇಹವನ್ನು 22 ತುಂಡುಗಳನ್ನಾಗಿ ಕತ್ತರಿಸಿದ್ದಾರೆ. ಅಲ್ಲದೇ ಮೃತದೇಹದ ತುಂಡುಗಳನ್ನು ಕವರ್ ನಲ್ಲಿ ಸುತ್ತಿ ರೆಫ್ರಿಜರೇಟರ್ ನಲ್ಲಿ ಇಟ್ಟಿದ್ದು, ನಿತ್ಯವೂ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ಬಿಸಾಕುತ್ತಿದ್ದರು.

Home add -Advt

ರಾತ್ರಿ ವೇಳೆಯಲ್ಲಿ ಪ್ರತಿ ದಿನ ಮೃತದೇಹದ ತುಂಡುಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಮೈದಾನದಲ್ಲಿ ಬಿಸಾಕುತ್ತಿದ್ದರು. ಹೀಗೆ ಬಿಸಾಕುತ್ತಿದ ದೃಶ್ಯ ಜೂನ್ 1ರಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪತಿ ಅಂಜನ್ ಟಾರ್ಚರ್ ತಾಳಲಾರದೇ ಪತ್ನಿ ಪೂನಂ ಹಾಗೂ ಮಗ ದೀಪಕ್ ಇಬ್ಬರೂ ಸೇರಿ ಅಂಜನ್ ನನ್ನು ಭೀಕರವಾಗಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಮುಂಬೈ ಮೂಲದ ಶ್ರದ್ಧಾ ವಾಲ್ಕರ್ ಎಂಬ ಯುವತಿಯನ್ನು ದೆಹಲಿ ಮೂಲದ ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ ಬರ್ಬರವಾಗಿ ಹತ್ಯೆ ಗೈದು, ಆಕೆಯ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಜ್ಡ್ ನಲ್ಲಿಟ್ಟಿದ್ದ. ಬಳಿಕ ಪ್ರತಿ ದಿನ ಒಂದೊಂದೇ ತುಂಡುಗಳನ್ನು ದೆಹಲಿಯ ಅರಣ್ಯಪ್ರದೇಶಕ್ಕೆ ಕೊಂಡೊಯ್ದು ಬಿಸಾಕುತ್ತಿದ್ದ. ಶ್ರದ್ಧಾ ಮೃತದೇಹದ ತುಂಡುಗಳಿಗಾಗಿ ದೆಹಲಿ ಪೊಲೀಸರು ಈವರೆಗೂ ದೆಹಲಿಯ ಅರಣ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆರೋಪಿ ಅಫ್ತಾಬ್ ನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ತನಿಖೆ ನಡೆಯುತ್ತಿರುವಾಗಲೇ ಇದೀಗ ಇಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ.

ಖಾಸಗಿ ವಾಹಿನಿ ಕ್ಯಾಮರಾಮೆನ್ ಪತ್ನಿಯೊಂದಿಗೆ ಆತ್ಮಹತ್ಯೆ; ಕಾರಣವೇನು?

https://pragati.taskdun.com/vijayapuraprivet-channal-cameramansuicidewith-wife/

Related Articles

Back to top button