Belagavi NewsBelgaum NewsKannada NewsKarnataka News

*ಎರಡನೇ ಬಾರಿಗೆ ನಾನೆ ಅಧ್ಯಕ್ಷನಾಗುವೆ: ಯತ್ನಾಳ್ ಬಣಕ್ಕೆ ತಿರುಗೇಟು ನೀಡಿದ ವಿಜೇಂದ್ರ*

ಪ್ರಗತಿವಾಹಿನಿ ಸುದ್ದಿ : ರಾಜ್ಯ ಬಿಜೆಪಿ ನಾಯಕತ್ವದ ಕುರಿತ ವಿರೋಧಿ ಅಲೆ, ಬಣ ಬಡದಾಟದ ನಡುವೆಯೇ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವೆ ಎಂದು ಹೇಳುವ ಮೂಲಕ ಬಿ.ವೈ.ವಿಜಯೇಂದ್ರ ಯತ್ನಾಳ & ಟೀಮ್ ಗೆ ಟಕ್ಕರ ಕೊಟ್ಟಿದ್ದಾರೆ.‌

ವಿಜೇಂದ್ರ ಅವರನ್ನು ಅಧ್ಯಕ್ಷಸ್ಥಾನದಿಂದ ಕೆಳಗೆ ಇಳಿಸಲು ಪ್ರಯತ್ನಿಸುತ್ತಿರುವ ಯತ್ನಾಳ & ಟಿಂ ಗೆ ಪರೋಕ್ಷವಾಗಿ ಟಾಂಕ್ ಕೊಟ್ಟಿದ್ದಾರೆ.‌ ಅಫಜಲಪುರದ ಗಣಗಾಪುರದಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಸ್ಪರ್ಧೆಯೂ ಮಾಡುತ್ತೇನೆ.. ಮತ್ತೊಮ್ಮೆ ನಾನೇ ಎರಡನೇ ಬಾರಿಗೆ ಅಧ್ಯಕ್ಷನೂ ಆಗುವೆ ಎಂದು ಬಂಡಾಯ ನಾಯಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ತಿರುಗೇಟು ನೀಡಿದರು.

Home add -Advt

ರಾಜಕೀಯ ಅಂದ ಮೇಲೆ ಸಮಸ್ಯೆಗಳು, ಸಂಕಷ್ಟಗಳು ಇರುತ್ತವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದರು. ಇನ್ನು ಯತ್ನಾಳ್ & ಟೀಂ ಪ್ರತ್ಯೇಕ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 5 ರಿಂದ 6 ಜನ ನಾಯಕರನ್ನು ವಿಶ್ವಾಸಕ್ಕೆ ಪಡೆಯಲು ಆಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

Related Articles

Back to top button