
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾದ ಎರಡೂ ಮೃತದೇಹಗಳ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಂಗಲೆ ಗಲ್ಲಿಯ ವಿಜಯ ಪವಾರ ಮತ್ತು ಶಹಾಪುರದ ಚಿತ್ರಲೇಖಾ ಮೃತರು ಎಂದು ಗೊತ್ತಾಗಿದೆ. ಇಬ್ಬರೂ ಮಾನಸಿಕವಾಗಿ ಖಿನ್ನರಾಗಿದ್ದು, ಇಬ್ಬರಿಗೂ ಯಾವುದೇ ಸಂಬಂಧವಿಲ್ಲ. ಪ್ರತ್ಯೇಕವಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ಶವಗಳೂ ಒಂದೇ ಬಾರಿ ಪತ್ತೆಯಾಗಿವೆ. ವಿಜಯ ಪವಾರ ಪತ್ನಿ ಅನಾರೋಗ್ಯದಿಂದ ಸಾವಿಗೀಡಾಗಿದ್ದರಿಂದ ಅವರು ಖಿನ್ನತೆಗೊಳಗಾಗಿದ್ದರು. ಚಿತ್ರಲೇಖಾ ತಾಯಿ ಸಾವಿಗೀಡಾಗಿದ್ದರಿಂದ ಅವರೂ ಖಿನ್ನತೆಗೆ ಒಳಗಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ