ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿವಿಧ ಬಗೆಯ 18.30 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ ಡಿಎಸ್ ಪಿ ಅನಿಲಕುಮಾರ ನಂದೀಶ್ವರ ಮತ್ತು ಸಂಕೇಶ್ವರ ಸಿಪಿಐ ವಿಜಯಕುಮಾರ ಮೇಳವಂಕಿ ನೇತೃತ್ವದ ಸಿಬ್ಬಂದಿಗಳು ಹುಕ್ಕೇರಿ ತಾಲೂಕಿನ ಸಂಕೇಶ್ವರ ಹತ್ತಿರ ಕಮತನೂರ ಗೇಟ್ ಬಳಿ ಗೋವಾದಿಂದ ಅಂಬೋಲಿ ಮಾರ್ಗವಾಗಿ ಬರುತ್ತಿದ್ದ ಐಶರ್ ಲಾರಿ ತಡೆದು ತಪಾಸಣೆ ನಡೆಸಿದಾಗ ಭತ್ತದ ಹುಲ್ಲಿನ ನಡುವೆ ಲಾರಿಯಲ್ಲಿ ವಿವಿಧ ಬಗೆಯ ಸುಮಾರು 280 ಮದ್ಯದ ಬಾಕ್ಸ್ ಗಳು ಪತ್ತೆಯಾದವು.
ಲಾರಿ ಮತ್ತು ಚಾಲಕ ಬೆಳಗಾವಿ ತಾಲೂಕಿನ ಖನಗಾಂವಿ ಗ್ರಾಮದ ಬಸವರಾಜ ದಿಂಡಲಕುಂಪಿ (36)ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಚಾಲಕನನ್ನು ವಿಚಾರಿಸಿದಾಗ “ಮದ್ಯ ಸಾಗಾಟದ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇವಲ ನನಗೆ ಮಹಾರಾಷ್ಟ್ರದ ಒಂದು ಸ್ಥಳದಲ್ಲಿ ಲಾರಿ ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ” ಎಂದು ಹೇಳಿದ್ದಾನೆನ್ನಲಾಗಿದೆ.
ದಾಳಿಯಲ್ಲಿ ಚಿಕ್ಕೋಡಿ ಅಬಕಾರಿ ಉಪ ಆಯುಕ್ತ ಡಾ. ವೈ. ಮಂಜುನಾಥ ಮತ್ತು ಬೆಳಗಾವಿಯ ಜಂಟಿ ಆಯುಕ್ತ ಫಿರೋಜ್ ಖಾನ ಹಾಗೂ ಚಿಕ್ಕೋಡಿ ಜಂಟಿ ಆಯುಕ್ತ ಜಗದೀಶ ಕುಲಕರ್ಣಿ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಅನಿಲಕುಮಾರ ನಂದೇಶ್ವರ, ನಿರೀಕ್ಷಕರಾದ ಪ್ರವೀಣ ರಂಗಸುಭೆ, ಕೆ. ಲಿಂಗರಾಜ, ವಿಜಯಕುಮಾರ ಮೇಳವಂಕಿ, ಉಪ ನಿರೀಕ್ಷಕರಾದ ಶ್ರೀಶೈಲ ಗುಡಮೆ, ಹಸನ್ ಸಾಬ ನದಾಫ, ಗಾರಡೆ, ಮಹಾಬಲ ಉಗಾರ, ಶಂಕರಾನಂದ ಮುಧೋಳಿ, ರಾಜು ಅಂಬಾರಿ, ಫಯಾಜ ಸಯ್ಯದ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪಶ್ಚಿಮ ಬಂಗಾಳದಲ್ಲಿ ಬಿಎಸ್ಎಫ್ ಯೋಧ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ