Kannada NewsKarnataka NewsLatest

​ಹರ್ಷ ಸಕ್ಕರೆ ಕಾರ್ಖಾನೆ ಎಥೆನಾಲ್ ಘಟಕ ಉದ್ಘಾಟನೆ, ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಹೆಚ್ಚುವರಿಯಾಗಿ ಪ್ರತಿ ಟನ್ ಕಬ್ಬಿಗೆ 100 ರೂ. ನೀಡುವುದಾಗಿ ಘೋಷಣೆ;

ಎಫ್ಆರ್ ಪಿ ದರಕ್ಕಿಂತ 198 ರೂ. ಹೆಚ್ಚು ನೀಡಿದ ಕಾರ್ಖಾನೆ

ಪ್ರಗತಿವಾಹಿನಿ ಸುದ್ದಿ, ​ಸವದತ್ತಿ –  ಸವದತ್ತಿಯ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ  100 ಕೆಎಲ್ ಸಾಮರ್ಥ್ಯದ ಎಥೆನಾಲ್ ಘಟಕದ ಬಾಯ್ಲರ್ ಪ್ರದೀಪನ​ ಹಾಗೂ​​ ಕಬ್ಬು ನುರಿಸುವ ಹಂಗಾಮಿಗೆ ಬಾಯ್ಲರ್ ಹಾಗೂ ಕೇನ್ ಕ್ಯಾರಿಯರ್ ಪೂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
​ಹೂಲಿ ಮಠದ ಶ್ರೀ ಉಮೇಶ್ವರ ಮಹಾಸ್ವಾಮಿಗಳು ಸಂಭಯ್ಯನವರಮಠ ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಾರ್ಖಾನೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡಿದ 10 ರೈತರನ್ನು ಗೌರವಿಸಿ, ಸನ್ಮಾನಿಸಲಾಯಿತು.
2021-22 ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ಎಲ್ಲ ರೈತರಿಗೆ ಪ್ರತಿ ಟನ್ ಗೆ ಹೆಚ್ಚುವರಿಯಾಗಿ 100 ರೂ,ಗಳನ್ನು ನೀಡುವುದಾಗಿ ​ಕಾರ್ಖಾನೆಯ ಚೇರಮನ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಪ್ರಕಟಿಸಿದ್ದಾರೆ. ಒಟ್ಟಾರೆಯಾಗಿ 2021-22 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕಬ್ಬು ಕಟಾವು ಹಾಗೂ ಕಬ್ಬು ಸಾಗಾಣಿಕೆಯನ್ನು ಹೊರತುಪಡಿಸಿ, ಪ್ರತಿ ಟನ್ ಗೆ 2700 ​​ರೂ,ಗಳನ್ನು ಸಂದಾಯ ಮಾಡಿದಂತಾಗುತ್ತದೆ.​ ​ಇದು 2021-22ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯ ಮತ್ತು ಲಾಭದಾಯಕ ಬೆಲೆ (​​FRP) ದರ​ಕ್ಕಿಂತ 198​ ರೂ.​ ಹೆಚ್ಚುವರಿಯಾಗಿ ನೀಡಿದಂತಾಗುವುದು​. 2022-23 ನೇ ಸಾಲಿಗೂ ಕೂಡಾ ಕೇಂದ್ರ ಸರ್ಕಾರ ನಿಗದಿ ಪಡಿಸಿದ ನ್ಯಾಯ ಹಾಗು ಲಾಭದಾಯಕ ಬೆಲೆಯನ್ನು ಆಧರಿಸಿ, ಯೋಗ್ಯ ದರವನ್ನು ನೀಡಲಾಗುವುದು​ ಎಂದು ತಿಳಿಸಿರುವ ಅವರು,ಈ ವರ್ಷವೂ ಕೂಡ ಒಳ್ಳೆಯ ಗುಣಮಟ್ಟದ ಕಬ್ಬುಗಳನ್ನು ಪೂರೈಕೆ ಮಾ​ಡುವಂತೆ ಅವರು ರೈತರಲ್ಲಿ ಮನವಿ​ ಮಾಡಿದರು.
​  
​  ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ನಿರ್ದೇಶಕ​ ಮೃಣಾಲ ಆರ್. ಹೆಬ್ಬಾಳಕರ್, ಈ ಭಾಗದ ಪ್ರಗತಿಪರ ಕಬ್ಬು ಬೆಳೆಗಾರ ರೈತರು, ಕಾರಖಾನೆಯ ಅಭಿಮಾನಿಗಳು, ಹಿರಿಯ ಅಧಿಕಾರಿಗಳಾದ ಸದಾಶಿವ ಥೋರತ, ಎನ್. ಎಮ್. ಪಾಟಿಲ ಹಾಗೂ ಯು. ಸಿ. ಚೌಕಿಮಠ ಮೊದಲಾದವರು ಉಪಸ್ಥಿತರಿದ್ದರು.
https://pragati.taskdun.com/politics/state-govt-employeesretired-employeesda-increase/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button