ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕೆ.ಎಲ್. ಎಸ್. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ 25/07/2019ರಂದು ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಅಧಿಕಾರ ಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್.ಎಸ್. ಮಸಳಿ ಆಗಮಿಸಿದ್ದರು.
ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ತಂತ್ರಜ್ಞಾನದಿಂದ ಯುವ ಪೀಳಿಗೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಅವರದೇ ಆದ ವ್ಯಕ್ತಿತ್ವ ಇರುತ್ತದೆ, ಆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತ ಪ್ರಯತ್ನಿಸಬೇಕು, ತಮ್ಮನ್ನು ತಾವು ಯಾರೊಂದಿಗೂ ಹೋಲಿಸಿಕೊಳ್ಳಬಾರದು, ಅಲ್ಲದೇ ಮನುಷ್ಯನ ಸ್ವಭಾವ ಸ್ವಾರ್ಥತೆಯಿಂದ ತುಂಬಿರುತ್ತದೆ, ಯಾರೂ ಬೇರೊಬ್ಬರ ಏಳಿಗೆಯನ್ನು ಸಹಿಸುವುದಿಲ್ಲ, ನಾವೆಲ್ಲರೂ ನಿನ್ನೆಯ ಬಗ್ಗೆ ಮಾತನಾಡುತ್ತೇವೆ. ನಾಳೆಯ ಬಗ್ಗೆ ವಿಚಾರ ಮಾಡುತ್ತೇವೆ. ಆದರೆ ಇಂದಿನ ಬಗ್ಗೆ ಯಾರೂ ಯೋಚಿಸುವುದಿಲ್ಲ ಎಂಬುದಾಗಿ ಬಹುಮಾರ್ಮಿಕವಾಗಿ ಮಾತನಾಡಿದರು.
ಅಧ್ಯಕ್ಷರಾದ ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಚ್.ಎಚ್. ವೀರಾಪೂರರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಕಾಲೇಜಿನಲ್ಲಿ ನಡೆಯುವ ಎಲ್ಲ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ ಕಾಲೇಜಿನ ವೈಶಿಷ್ಟತೆಯ ಬಗ್ಗೆ ವಿವರಿಸಿದರು.
ಪ್ರೊ.ಗ್ಯಾಮಾನಾಯಕ ಎಚ್. ಹಾಗೂ ಪ್ರೊ. ಬೆಂಡಿಗೇರಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಪ್ರೊ. ನಮಿತಾ ಶೇಠೆ ಸ್ವಾಗತಿಸುತ್ತ ಅತಿಥಿಗಳ ಪರಿಚಯ ಮಾಡಿದರು. ದೈಹಿಕ ಶಿಕ್ಷಕಿಯಾದ ಪ್ರೊ. ನಮ್ರತಾ ಅಂಟಾಳಮರದ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು. ಪ್ರೊ. ಅಶ್ವಿನಿ ನಾಯಿಕ ಹಾಗೂ ಪ್ರೊ. ಶ್ಯಾಮಲಾ ಪಾಟೀಲ ನಿರೂಪಿಸಿದರು. ಪ್ರೊ. ಬೆಂಡಿಗೇರಿ ವಂದಿಸಿರು. ಕಾರ್ಯಕ್ರಮಕ್ಕೆ ಎಲ್ಲ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶೋಭೆಯನ್ನು ತಂದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ