Latest

ಎಂಟು ತಿಂಗಳ ಮಗು ಸಹಿತ ಭಾರತೀಯ ಕುಟುಂಬದ ಅಪಹರಣ

ಪ್ರಗತಿವಾಹಿನಿ ಸುದ್ದಿ, ಕ್ಯಾಲಿಫೋರ್ನಿಯಾ: ಇಲ್ಲಿನ ಮರ್ಸಿಡ್ ಕೌಂಟಿಯಿಂದ ಅಪಹರಣಗೊಂಡ ನಾಲ್ವರಲ್ಲಿ ಎಂಟು ತಿಂಗಳ ಹೆಣ್ಣು ಮಗು ಮತ್ತು ಆಕೆಯ ಪೋಷಕರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಸ್ದೀಪ್ ಸಿಂಗ್ (36),  ಜಸ್ಲೀನ್ ಕೌರ್ (27)  ಅವರ ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು ಅಮನದೀಪ್ ಸಿಂಗ್  (39) ಅವರನ್ನು ಶಸ್ತ್ರಸಜ್ಜಿತ ಹಾಗೂ ಅಪಾಯಕಾರಿ ಎನ್ನಲಾದ ವ್ಯಕ್ತಿಯೊಬ್ಬ ಅಪಹರಿಸಿದ್ದಾಗಿ ಮರ್ಸಿಡ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ. 

ತನಿಖೆ ಇನ್ನೂ ಜಾರಿಯಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ಆದರೆ ಅಪಹೃತರಾಗಲಿ, ಅಪಹರಣಕಾರರಾಗಲಿ ಕಂಡಲ್ಲಿ ಅವರನ್ನು ಸಮೀಪಿಸದೆ 911 ಸಹಾಯವಾಣಿಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಇದು ಕೊಲೆ ಎಂಬುದರಲ್ಲಿ ಎರಡು ಮಾತಿಲ್ಲ; ಸಾಕ್ಷ್ಯ ನಾಶಮಾಡಿದ ಸಿದ್ದರಾಮಯ್ಯ ಕ್ಷಮೆ ಕೇಳಲಿ; ಬಿಜೆಪ್ ಸದಸ್ಯ ರವಿಕುಮಾರ್ ಆಗ್ರಹ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button