ಕೆಎಲ್ಇಎಸ್ ಡಾ.ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ನಗರವು ಈ ಮೊದಲಿನಂತಲ್ಲ. ಕೇವಲ ಶೈಕ್ಷಣಿಕವಾಗಿ ಬೆಳೆದಿದೆ. ಕೈಗಾರಿಕರಣ, ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅತ್ಯಂತ ಕ್ಲಿಷ್ಟಕರವಾದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕರನ್ನು ಮುನ್ನಡೆಸುವ ಮಿಲಟರಿ ಅಧಿಕಾರಿಗಳನ್ನು ಬೆಳಗಾವಿಯು ದೇಶಕ್ಕೆ ಸರ್ಪಿಸುತ್ತಿದೆ. ದೇಶದಲ್ಲಿ ಯುವಕರೇ ಅತ್ಯಧಿಕವಾಗಿದ್ದು, ತಮ್ಮ ಸೇವೆಯನ್ನು ದೇಶ ಕಟ್ಟುವಲ್ಲಿ ಕೈಜೋಡಿಸಬೇಕೆಂದು ಪ್ಲಾಟೂನ ಕಮಾಂಡರ್ ವಿಂಗನ ಬ್ರಿಗೇಡಿಯರ ಬ್ರಿಜ್ ಗೋಪಾಲ ಅವರು ಕರೆ ನೀಡಿದರು.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಇಂದು ಭಾರತವು ಸಕಲ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸುತ್ತಿದ್ದು, ಶಿಕ್ಷಣ, ಸಂಶೋಧನೆ, ವೈದ್ಯಕೀಯ ಸೇರಿದಂತೆ ಸಕಲ ಕ್ಷೇತ್ರಗಳಲ್ಲಿ ಸ್ವಾವಲಂಭನೆ ಸಾಧಿಸುತ್ತಿದೆ. ಅದಕ್ಕಾಗಿ ಯುವಕರು ದೇಶದ ಅಭಿವೃದ್ದಿಯ ಭಾಗವಾಗಬೇಕು. ವೈದ್ಯರು, ವಿಜ್ಞಾನಿಗಳು ಗ್ರಾಮೀಣ ಭಾರತದ ಜನರನ್ನು ಶಿಕ್ಷಿತರನ್ನಾಗಿ ಮಾಡಲು ಮುಂದೆ ಬರಬೇಕು. ಸ್ವಾಸ್ಥ್ಯ ಕಾಪಾಡಲು ಒಳ್ಳೆಯ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ವಿ. ಜಾಲಿ ಅವರು ಮಾತನಾಡಿ, ವಿವೇಕಾನಂದ ಅವರ ಕನಸಿನ ಪ್ರಬುದ್ದ ಭಾರತಕ್ಕೆ ನಾವೆಲ್ಲರೂ ಕೈಜೋಡಿಸೋಣ. ಇಂದು ಕನಸು ನನಸಾಗುವ ಕಾಲ ಪಕ್ವವಾಗಿದೆ. ವಿಶ್ವವನ್ನೇ ಬೆರಗುಗೊಳಿಸುವ ಮಟ್ಟಿಗೆ ಅಭಿವೃದಿಯ ದಾಪುಗಾಲು ಇಡುತ್ತಿದೆ. ಅದರಂತೆ ನೆರೆಪೀಡಿತ ಜನರ ಆರೋಗ್ಯವನ್ನು ಕಾಪಾಡಲು ಆಸ್ಪತ್ರೆಯು ಸದಾ ಸನ್ನದ್ದವಾಗಿ ನಿಂತಿದೆ ಎಂದು ಹೇಳಿದರು.
ಕಾಹೇರನ ಕುಲಸಚಿವರಾದ ಡಾ. ವಿ ಡಿ ಪಾಟೀಲ ಅವರು ಮಾತನಾಡಿ, ನೆರೆ ಪೀಡಿತ ಪ್ರದೇಶಗಳ ಜನರು ಅನಾರೋಗ್ಯಕ್ಕೆ ತುತ್ತಾದರೆ ಅವಶ್ಯವಿರುವ ಜನರಿಗೆ ಉಚಿತ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಸೇವೆಯನ್ನು ಬಲಿಷ್ಠಗೊಳಿಸಲು ನಾವು ಇನ್ನೂ ಹೆಚ್ಚಿನ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಳ್ಳಬೆಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‍ಲೈನ್ ಪುಸ್ತಕವನ್ನು ಪ್ಲಾಟೂನ ಕಮಾಂಡರ ವಿಂಗನ ಬ್ರಿಗೇಡಿಯರ ಬ್ರಿಜ್ ಗೋಪಾಲ, ಡಾ. ವಿ ಡಿ ಪಾಟೀಲ ಅವರು ಮಧುಮೇಹ ವೈದ್ಯ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಫೋಕಸ್ ಸಂಚಿಕೆಯನ್ನು ಹಾಗೂ ಡಾ. ಎ ಎಸ್ ಗೋಧಿ ಅವರು ಬರೆದ ಪಿತ್ತಕೋಶದ ಹರಳುಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಡಾ. ಆರ್ ಬಿ ನೇರ್ಲಿ, ಡಾ.ಎ ಎಸ್ ಗೋಧಿ, ಡಾ. ಆರ್ ಎಸ್ ಮುಧೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ