Latest

ಎರಡು ಗುಂಡು ಬಿದ್ದ ನಂತರವೂ ಉಗ್ರರ ಸದ್ದಡಗಿಸಿದ ಶ್ವಾನ; ಹೆಮ್ಮೆ ವ್ಯಕ್ತಪಡಿಸಿದ ಭಾರತೀಯ ಸೇನಾಪಡೆ

ಪ್ರಗತಿವಾಹಿನಿ ಸುದ್ದಿ, ಶ್ರೀನಗರ: ಎರಡು ಗುಂಡುಗಳು ಬಿದ್ದರೂ ಎದೆಗುಂದದೆ ಕಾರ್ಯಪ್ರವೃತ್ತವಾಗಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನಾಪಡೆಯ ಶ್ವಾನ ಹೆಮ್ಮೆ ಮೂಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗುತಾಣದ ಮೇಲೆ ಸೋಮವಾರ ದಾಳಿ ನಡೆಸಿದ್ದರು. ಈ ವೇಳೆ ಭಯೋತ್ಪಾದಕರು ಅಡಗಿದ್ದ ಮನೆಯೊಳಗೆ ಸೇನಾಪಡೆಯ ಶ್ವಾನ ‘ಜೂಮ್’ ಕಾರ್ಯಾಚರಣೆಗಿಳಿದಿತ್ತು.

ಉಗ್ರರು ಎರಡು ಬಾರಿ ಗುಂಡು ಹಾರಿಸಿದ ನಂತರವೂ, ಜೂಮ್ ಮಾತ್ರ ತನ್ನ ಕಾರ್ಯವನ್ನು ಮುಂದುವರೆಸಿತ್ತು.

ಜೂಮ್ ಗಂಭೀರವಾಗಿ ಗಾಯಗೊಂಡಿದ್ದರೂ ಇಬ್ಬರು ಭಯೋತ್ಪಾದಕರ ಹುಟ್ಟಡಗಿಸುವಲ್ಲಿ ಯಶಸ್ವಿಯಾಗಿರುವುದಾಗಿ ಸೇನಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಶ್ವಾನಕ್ಕೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಜೂಮ್ ಕಾರ್ಯಕ್ಕೆ ಸೇನಾಪಡೆ ಹೆಮ್ಮೆ ವ್ಯಕ್ತಪಡಿಸಿದೆ.

Home add -Advt

ಬೆಳಗಾವಿ: ಐತಿಹಾಸಿಕ ಕೊಕಟನೂರು ಎಲ್ಲಮ್ಮ ದೇವಿ ದೇವಸ್ಥಾನ ಜಲಾವೃತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button