Latest

ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 38 ಹೆಡ್ ಕಾನ್ಸ್ ಟೇಬಲ್ ಹುದ್ದೆ ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸಿಆರ್ ಪಿಎಫ್ ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಇಂಟರ್ ಮಿಡಿಯೇಟ್ ಅಥವಾ ಸಮನಾದ ವಿದ್ಯಾರ್ಹತೆ ಜೊತೆಗೆ ಇಂಗ್ಲೀಷ್ ಅಥವಾ ಹಿಂದಿ ಟೈಪಿಂಗ್ ಸ್ಕಿಲ್ ಜೊತೆಗೆ ದೈಹಿಕ ಮತ್ತು ಮೆಡಿಕಲ್ ಫಿಟ್ ನೆಸ್ ಹೊಂದಿರಬೇಕು.

Home add -Advt

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 25 ವರ್ಷ ವಯೋಮಿತಿ ಒಳಗಿರಬೇಕು. ಅಧಿಸೂಚನೆಯಲ್ಲಿ ತಿಳಿಸಿದಂತೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನಾಂಕ 15/10/2021. ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ; ಬಾರಪ್ಪ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದು ವಿಜಯೇಂದ್ರಗೂ ಸೂಚಿಸಿದ ಬೊಮ್ಮಾಯಿ

Related Articles

Back to top button