Kannada NewsKarnataka News
ಕಾಣೆಯಾಗಿದ್ದ ಮಹಿಳೆಯ ಶವ ಮಾರ್ಕಂಡೇಯ ನದಿಯಲ್ಲಿ ಪತ್ತೆ

ಕಾಣೆಯಾಗಿದ್ದ ಮಹಿಳೆಯ ಶವ ಮಾರ್ಕಂಡೇಯ ನದಿಯಲ್ಲಿ ಪತ್ತೆ
ಪ್ರಗತಿವಾಹಿನಿ ಸುದ್ದಿ, ಅಗಸಗಿ : ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಸೋಮವಾರ ಕಾಣೆಯಾಗಿದ್ದ ಮಹಿಳೆಯೋರ್ವರ ಶವ ಬುಧವಾರ ಬೆಳಿಗ್ಗೆ ಜುಮನಾಳ ಗ್ರಾಮದ ಹತ್ತಿರವಿರುವ ಮಾರ್ಕಂಡೇಯ ನದಿಯಲ್ಲಿ ತೇಲಿಬಂದು ಗಿಡ ಗಂಟಿಯಲ್ಲಿ ಸಿಲುಕಿದ ಸ್ಥಿತಿಯಲ್ಲಿ ದೊರೆತಿದೆ.
ಮೃತರು ಕಾಕತಿ ಗ್ರಾಮದ ಸಿದ್ದೇಶ್ವರ ನಗರದ ನಿವಾಸಿ ಸಾವಿತ್ರಿ ಶೆಟ್ಟು ಬಸರಿಕಟ್ಟಿ (60).
ಸೋಮವಾರ ಹೊಲಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಸಾವಿತ್ರಿ ಸಂಜೆಯಾದರು ಮರಳಿ ಬಂದಿರಲಿಲ್ಲ. ಅವರ ಶೋಧದಲ್ಲಿದ್ದ ಸಂಬಂಧಿಕರು ಶವ ಕಂಡ ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಸಿಕ್ಕ ನಂತರ ಪೋಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕಾಕತಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಶವಪರೀಕ್ಷೆಗೆ ಕಳಿಸಿದ್ದಾರೆ.
ಸಾವಿತ್ರಿ ಅವಿವಾಹಿತೆ ಆಗಿದ್ದು, ಸಂಬಂಧಿಕರ ಆಶ್ರಯದಲ್ಲಿ ಹೊಲಮನೆ ಕೆಲಸ ಮಾಡಿಕೊಂಡಿದ್ದರು. ಹೊಲ ಕೆಲಸಕ್ಕೆ ತೆರಳಿದಾಗ ನದಿಯಲ್ಲಿ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿರುವ ಬಗ್ಗೆ ಪ್ರಕರಣದಲ್ಲಿ ದಾಖಲಿಸಲಾಗಿದೆ ಎಂದು ಕಾಕತಿ ಪೋಲಿಸ್ ಠಾಣೆ ಪಿ ಐ ಶ್ರೀಶೈಲ ಕೌಜಲಗಿ ತಿಳಿಸಿದ್ದಾರೆ.



