ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿಯೇ ಪ್ರಪ್ರಥಮಬಾರಿಗೆ ಅಂತರರಾಷ್ಟ್ರೀಯ ಮಾಧ್ಯಮ ಸಮ್ಮೇಳನ ಕುಂದಾನಗರಿ ಬೆಳಗಾವಿಯಲ್ಲಿ ಜೂನ್ 10, 2023 ರಂದು ನೆಹರು ನಗರದ ಕನ್ನಡ ಭವನದಲ್ಲಿ ಎರ್ಪಡಿಸಲಾಗಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪತ್ರಕರ್ತರನ್ನು ಒಂದೇ ಸೂರಿನಡಿ ಹಾಗೂ ಖ್ಯಾತ ಸಂಪಾದಕರು ಹಾಗೂ ಸಾಧಕರನ್ನು ಒಂದೇ ವೇದಿಕೆಯ ಮೇಲೆ ಸತ್ಕರಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಚಿಂತನ ಗೋಷ್ಠಿ:
ಪರಿಸರ ನಾಶ ಮತ್ತು ಪತ್ರಕರ್ತರ ಜವಾಬ್ದಾರಿ; ಜಾಗತಿಕ ತಾಪಮಾನ ಏರಿಕೆ, ಮತ್ತು ವರದಿಗಾರಿಕೆ ಕುರಿತು ಚಿಂತನಗೋಷ್ಠಿ ನಡೆಯಲಿವೆ.
1. ಎಚ್ ಆರ್ ರಂಗನಾಥ , ಪ್ರಧಾನ ಸಂಪಾದರು ಪಬ್ಲಿಕ್ ಟಿವಿ.
2. ಸನತ್ ಜಯಸೂರ್ಯ ಖ್ಯಾತ ಕ್ರಿಕೆಟ್ ಪಟು ಶ್ರೀಲಂಕಾ.
3. ಚಲಕಾ ಗಜಬಾಹು, ಎಡಿ ಪ್ರವಾಸೋದ್ಯಮ ಉತ್ತೇಜನ ಸಮಿತಿ ಶ್ರೀಲಂಕಾ.
3. ಆನಂದ ಸಂಕೇಶ್ವರ , ಎಂ ಡಿ. ವಿ ಆರ್ ಎಲ್ ಗ್ರೂಪ್.
4. ಸಂಜಯ ಘೋಡಾವತ , MD ಸ್ಟಾರ್ ಏರ್ ಲೈನ್ಸ್, ಕೊಲ್ಹಾಪುರ.
5. ಗೀತಿಕಾ , ಅಂತರಾಷ್ಟ್ರೀಯ ಪತ್ರಕರ್ತೆ, ಕೊರಿಯಾ ಅವರು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಡಾ: ಭೀಮಶಿ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪ್ ಕುರಂದವಾಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ವಿ.ಪ್ರಭಾಕರ್ ಅವರಿಗೆ ಆಹ್ವಾನ:
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರನ್ನು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಅಭಿನಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಜೂ.10 ಶನಿವಾರದಂದು ಬೆಳಗಾವಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾದ್ಯಮ ಸಮ್ಮೇಳದಲ್ಲಿ ಅವರನ್ನು ಸನ್ಮಾನಿಸಲಾಗುವುದು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನೇಮಕಗೊಂಡಿರುವ ಹಿರಿಯ ಪತ್ರಕರ್ತರಾದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಬೆಳಗಾವಿ ಜಿಲ್ಲಾ ಘಟಕದಿಂದ ಗೌರವ ಸನ್ಮಾನಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಅವರಿಗೆ ಮಖಗಳವಾರ(ಮೇ 22) ಆಹ್ವಾನ ನೀಡಲಾಯಿತು.
ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕುರುಂದವಾಡೆ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಭೀ. ಬಾಳೋಜಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಏಷ್ಯಾ ಸಂಚಾಲಕ ಎಚ್.ಬಿ.ಮದನಗೌಡ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ