Latest

ಬೆಟ್ಟಿಂಗ್ ದಂಧೆ; ಶಾಸಕ ಮತ್ತಿಮೂಡ ಪತ್ನಿ ಕಾರು ಜಪ್ತಿ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಸೊಲ್ಲಾಪುರ ಸಿಸಿಬಿ ಪೊಲೀಸರು, ಶಾಸಕರ ಪತ್ನಿಯ ಕಾರನ್ನು ಜಪ್ತಿ ಮಾಡಿದ್ದಾರೆ.

ಐಪಿಎಲ್ ಬೆಟ್ಟಿಂಗ್ ನಡೆಸುತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಲಬುರ್ಗಿ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಇದೀಗ ಶಾಸಕ ಬಸವರಾಜ್ ಮತ್ತಿಮೂಡ ಅವರ ಪತ್ನಿ ಜಯಶ್ರೀ ಮತ್ತಿಮೂಡ ಅವರ ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ.

ಬಂಧಿತರನ್ನು ಅತುಲ್ ಸಿರಶೆಟ್ಟಿ, ಪ್ರದೀಪ್ ಮಲ್ಲಯ್ಯ ಕಾರಂಜೆ ಎಂದು ಗುರುತಿಸಲಾಗಿದ್ದು, 38.44 ಲಕ್ಷ ನಗದು , ಎರಡು ಕಾರು, ಒಂದು ಬೈಕ್, ನಾಲ್ಕು ಲ್ಯಾಪ್ ಟಾಪ್, ಟಿವಿಗಳನ್ನು ವಶಕ್ಕೆ ಪಡೆದಿದ್ದಾರೆ.

Home add -Advt

Related Articles

Back to top button