ಪ್ರಗತಿವಾಹಿನಿ ಸುದ್ದಿ : ಹೊಸ ವರ್ಷದ ದಿನವೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ರಾಮನಗ ಜಿಲ್ಲೆಯ ಮಾಗಡಿಯಲ್ಲಿ ಹೊಸವರ್ಷದ ದಿನದಂದೇ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.
ಮಾಗಡಿ ಹೊಸ ಪೇಟೆ ಸರ್ಕಲ್ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬೈಕ್ ಡಿಕ್ಕಿಯಾಗಿ ಸಿದ್ದಪ್ಪ (45) ಎಂಬ ಪಾದಚಾರಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ನಡುರಾತ್ರಿ 12.30 ರ ಸಮಯದಲ್ಲಿ ಘಟನೆ ನಡೆದಿದ್ದು ಬೈಕ್ ಸವಾರ ಮೋಹನ್ ಎಂಬಾತನಿಗೆ ಗಾಯವಾಗಿದ್ದು,ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಟೀ ಕುಡಿಯಲು ಹೊರಟಿದ್ದ ಯುವಕರ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿ ಐವರು ಗಾಯಗೊಂಡಿರುವ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯದ ಜನತಾ ಕಾಲೋನಿ ಬಳಿ ನಡೆದಿದೆ.
ಮಂಜು (31), ಕಿರಣ್ (30), ಮೂಲತಃ ಮಾಗಡಿ ತಾಲೂಕಿನ ಚೋಳನಾಯಕನಹಳ್ಳಿ ಗ್ರಾಮದವರು ಮೃತ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಸಮಯದಲ್ಲಿ ಅವಘಡ ನಡೆದಿದೆ. ಗಾಯಾಳುಗಳಿಗೆ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ