Latest

ಗಾಜಿನ ಬಾಟಲ್ ನಿಂದ ನಿರ್ದೇಶಕರಿಗೆ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದವರಿಗೂ ಬಿತ್ತು ಏಟು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿರ್ದೇಶಕರೊಬ್ಬರಿಗೆ ಗಾಜಿನ ಬಾಟಲ್ ನಿಂದ ಏಕಾಏಕಿ ಹೊಡೆದುಬಿಟ್ಟಿದ್ದು, ಭಾರಿ ಸುದ್ದಿಯಾಗಿದೆ.

ಶಿಲ್ಪಾ ಶೆಟ್ಟಿ, ಇದೀಗ ಸಿನಿಮಾ, ಕಿರುತೆರೆ, ಜಾಹೀರಾತು, ರಿಯಾಲಿಟಿ ಶೋಗಳಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದು, ಈ ಕಾರ್ಯಕ್ರಮದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಶಿಲ್ಪಾ ಶೆಟ್ಟಿ ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಜಡ್ಜ್ ಆಗಿದ್ದ ಗಾಯಕ, ನಿರ್ದೇಶಕ ಬಾದ್ ಷಾ ಅವರಿಗೂ ಕೂಡ ಏಟು ಬಿದ್ದಿದೆ.

ತಾವು ಮಾತನಾಡಿಸಿದರೂ ತಮ್ಮನ್ನು ಗಮನಿಸದೇ ಇದ್ದ ರೋಹಿತ್ ಶೆಟ್ಟಿಗೆ ಗಾಜಿನ ಬಾಟಲಿಯಿಂದ ಶಿಲ್ಪಾ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅಸಲಿಗೆ ಈ ಹೊಡೆದಾಟ ನಡೆದಿರುವುದು ತಮಾಷೆಗಾಗಿ ಎಂಬುದು ವಿಶೇಷ. ಶೂಟಿಂಗ್​ ಬಿಡುವಿನ ವೇಳೆ ರೋಹಿತ್​ ಶೆಟ್ಟಿ ಮತ್ತು ಬಾದ್​ಷಾ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಶಿಲ್ಪಾ ಶೆಟ್ಟಿ ,ರೋಹಿತ್​ ಶೆಟ್ಟಿಯ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಕಡೆಗೆ ರೋಹಿತ್​ ಶೆಟ್ಟಿ ಗಮನ ಕೊಡಲಿಲ್ಲ. ಅದರಿಂದ ಶಿಲ್ಪಾ ಶೆಟ್ಟಿಗೆ ಕೋಪ ಬಂದು ಗಾಜಿನ ಬಾಟಲ್​ ಎತ್ತಿಕೊಂಡು ರೋಹಿತ್​ ಶೆಟ್ಟಿಗೆ ಹೊಡೆದೇ ಬಿತಿದ್ದಾರೆ. ಶಾಕ್​ ಆದ ರೋಹಿತ್​ ಶೆಟ್ಟಿ, ‘ಹುಚ್ಚು ಹಿಡಿದಿದೆಯಾ’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಧ್ಯೆ ಮಾತನಾಡಲು ಬಂದ ಬಾದ್​ಷಾ ಅವರಿಗೂ ಶಿಲ್ಪಾ ಶೆಟ್ಟಿ ಗಾಜಿನ ಬಾಟೆಲ್​ನಿಂದ ಹೊಡೆದಿದ್ದಾರೆ. ಈ ಹುಸಿ ತಮಾಷೆ ವಿಡಿಯೋ ಸಖತ್ ವೈರಲ್ ಆಗಿದೆ.

Home add -Advt

Related Articles

Back to top button