Latest

*ಶಿಕ್ಷಕರ ಅಧ್ಯಯನ ಪ್ರವಾಸ ತಡೆದ ಲೆಫ್ಟಿನೆಂಟ್ ಗವರ್ನರ್; ಎಎಪಿ ಪ್ರತಿಭಟನಾ ಮೆರವಣಿಗೆ*

 ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಫಿನ್ ಲ್ಯಾಂಡಿಗೆ ತೆರಳಲಿದ್ದ ಶಿಕ್ಷಕರ ಅಧ್ಯಯನ ಪ್ರವಾಸವನ್ನು ತಡೆದುದನ್ನು ಖಂಡಿಸಿ ಇಂದು ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಫಿನ್ ಲ್ಯಾಂಡಿಗೆ ಹೋಗಲಿದ್ದ ಶಿಕ್ಷಕರನ್ನು ತಡೆದುದ್ದರ ಉದ್ದೇಶವೇನು ಎಂದು ಲೆಫ್ಟಿನೆಂಟ್ ಗೊಅವರ್ನರ್ ಅವರನ್ನು ಪ್ರಶ್ನಿಸಿದರು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಈ ಘೋಷಣೆಯೊಂದಿಗೆ ತೆರಳಿದ್ದು, ದೆಹಲಿಯಾದ್ಯಂತ ಪ್ರತಿಧ್ವನಿಸಿತು.

Home add -Advt

ತರಬೇತಿ ಮತ್ತು ಅಧ್ಯಯನಕ್ಕಾಗಿ ಶಿಕ್ಷಕರ ಒಂದು ತಂಡವು ಫಿನ್ ಲ್ಯಾಂಡಿಗೆ ಹೋಗಲು ತಯಾರಾಗಿತ್ತು. ಅದನ್ನು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ತಡೆದಿರುವುದರಿಂದ ಬಿಜೆಪಿ ಪರ ನಿಂತಿರುವ ಸಕ್ಸೇನಾ ಮತ್ತು ಎಎಪಿಯ ದೆಹಲಿ ಸರಕಾರದ ನಡುವೆ ಮತೆ ಸಮರಕ್ಕೆ ಕಾರಣವಾಗಿದೆ.

*25,000 ಕೋಟಿ ಬಾಕಿ ಬಿಲ್ ಉಳಿಸಿಕೊಂಡ ಸರ್ಕಾರ; ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ ಎಚ್ಚರಿಕೆ ಕೊಟ್ಟ ಕೆಂಪಣ್ಣ*

https://pragati.taskdun.com/kempannaworningbjp-govt/

Related Articles

Back to top button