Belagavi NewsBelgaum NewsKarnataka News

*ಬೆಳಗಾವಿ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯಕೇಂದ್ರ ಬೆಳಗಾವಿ ಇವರ ವತಿಯಿಂದ 16-04-2025 ರ ಮುಂಜಾನೆ 10.00 ರಿಂದ ಮದ್ಯಾಹ್ನ 2.00 ಗಂಟೆಯ ವರೆಗೆ, ಎಸ್‌ಎಸ್ಎಲ್‌ಸಿ, ಪಿಯುಸಿ, ಐಟಿಐ ಮತ್ತು ಡಿಪ್ಲೋಮಾ ಯಾವುದೇ ಪದವಿ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ ಉದ್ಯೋಗ ಮೇಳ ವನ್ನು ಬೆನನ್‌ ಸ್ಮಿತ್ ಮೆಥೋಡಿಸ್ಟ ಪದವಿ ವಿದ್ಯಾಲಯ, ಬೊಗಾರ್‌ವೆಸ್ ಸರ್ಕಲ್, ಬೆಳಗಾವಿ. ಇಲ್ಲಿ ಆಯೋಜಿಸಲಾಗಿದೆ.

ಆಸಕ್ತ ಆಭ್ಯರ್ಥಿಗಳು https://forms.gle/GR53QSjbfmenYTpu6 ವೆಬ್‌ಸೈಟ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. 

ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ DEE.BGV ಇನ್‌ ಸ್ಟಾಗ್ರಾಮ್ ಹಾಗೂ YES KENDRA, BELAGAVI ಚಾನಲ್‌ನ್ನು ಪಾಲೋ ಮಾಡಬಹುದು. 

ಅಥವಾ ಮೊಬೈಲ್ ಸಂಖ್ಯೆ: 8880652225, 9916910200 ಇವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button