ಮಹಾರಾಷ್ಟ್ರ ನೀರಾವರಿ ಅಧಿಕಾರಿಗಳೊಂದಿಗೆ ಜೊಲ್ಲೆ ದಂಪತಿ ಸಭೆ : ನೀರಿನ ಕೊರತೆ ಆಗದಂತೆ ಕ್ರಮಕ್ಕೆ ಸೂಚನೆ


ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ – ಗುರುವಾರ ಕೊಲ್ಲಾಪುರ ನಗರದ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಅಭಿಜೀತ ಮೇತ್ರೆ ಅವರನ್ನು ರೈತರೊಂದಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಭೇಟಿ ಮಾಡಿ, ನೀರಿನ ವಿಷಯ ಕುರಿತು ಚರ್ಚಿಸಿದರು.

ಈ ಸಭೆಯಲ್ಲಿ, ಬರಗಾಲ ಇರುವ ಹಿನ್ನೆಲೆಯಲ್ಲಿ ಬೇಸಿಗೆ ಕಾಲದಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ನೀರು ಬಿಡಬೇಕು. ನಮ್ಮ ರೈತರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂದು ಸೂಚನೆ ನೀಡಲಾಯಿತು. ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿ ನೀರು ಬಿಡಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗುವುದು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಮಲಗೊಂಡ ಪಾಟೀಲ, ಉಪಾಧ್ಯಕ್ಷರಾದ ಪವನ ಪಾಟೀಲ, ನಿರ್ದೇಶಕ ಮಂಡಳಿ ಸದಸ್ಯರಾದ ಜಯವಂತ ಭಾಟಲೆ, ಸಮಿತ ಸಾಸನೆ, ಸಿದ್ದು ನರಾಟೇ, ಸುನೀಲ ಪಾಟೀಲ, ಪ್ರಕಾಶ ಶಿಂಧೆ, ರಮೇಶ ಪಾಟೀಲ , ಅಭಿನಂದನ ಮುದಕುಡೆ, ನಗರಸಭೆ ಸದಸ್ಯರು, ರೈತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ