ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಅಪ್ಘಾನಿಸ್ತಾನದ ಟೆಲಿವಿಷನ್ ವರದಿಗಾರ್ತಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ. ಇದು ತಾಲಿಬಾನಿಗಳ ಕೃತ್ಯ ಎಂದು ಶಂಕಿಸಲಾಗಿದೆ.
ಮಲಾಲಾ ಮಾಯಿವಾಂಡ್ ಹತ್ಯೆಯಾದ ಪತ್ರಕರ್ತೆ. ಕಾರಿನಲ್ಲಿ ಕಚೇರಿಗೆ ತೆರಳುತ್ತಿದ್ದ ವೇಳೆ ಅಪ್ಘಾನಿಸ್ತಾನದ ಜಲಾಲಾಬಾದ್ ನಲ್ಲಿ ಮಲಾಲೈಮಾಯಿ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಕಾರು ಚಾಲಕ ಮೊಹಮ್ಮದ್ ತಾಹೀರ್ ಕೂಡ ಮೃತಪಟ್ಟಿದ್ದಾರೆ.
ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಅಪ್ಘಾನಿಸ್ತಾನದಲ್ಲಿರುವ ಬ್ರಿಟನ್ ರಾಯಬಾರಿ ಆಲಿಸನ್ ಬ್ಲೇಕ್, ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ