Politics

*ಸ್ವಾಮೀಜಿ, ಅವರ ಸ್ಥಾನ ಬಿಟ್ಟು ಕೊಡ್ತಾರಾ? ಸಚಿವ ಕೆ.ಎನ್. ರಾಜಣ್ಣ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಚಂದ್ರಶೇಖರ ಸ್ವಾಮೀಜಿ ಸಲಹೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಕೆ.ಎನ್.ರಾಜಣ್ಣ, ಸಿಎಂ ಆಗಲಿ ಯಾರೇ ಆಗಲಿ ಯಾರಾದರೂ ಸ್ಥಾನ ಬಿಟ್ಟುಕೊಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಸಿಎಂ ಸ್ಥಾನ ಯಾರು ಬಿಟ್ಟುಕೊಡ್ತಾರೆ? ಅವರೂ ಬಿಟ್ಟುಕೊಡಲ್ಲ, ಇವರೂ ಬಿಟ್ಟುಕೊಡಲ್ಲ. ಈಗ ಸ್ವಾಮೀಜಿ ಅವರು ಸ್ಥಾನ ಬಿಟ್ಟುಕೊಡ್ತಾರಾ? ಸ್ವಾಮೀಜಿ ಸ್ಥಾನ ಬಿಡಲಿ, ನಾನೇ ಸ್ವಾಮಿ ಆಗ್ತೀನಿ ಎಂದು ಹೇಳಿದ್ದಾರೆ.

ಸ್ವಾಮೀಜಿ ಯಾವ ಅರ್ಥದಲ್ಲಿ ಸಿಎಂ ಸ್ಥಾನ ಡಿ.ಕೆ.ಶಿವಕುಮಾರ್ ಗೆ ಬಿಟ್ಟುಕೊಡಿ ಎಂದು ಹೇಳಿದ್ದಾರೆ ಗೊತ್ತಿಲ್ಲ. ಸುಮ್ಮನೇ ಏನೋ ಹೇಳಿದರೆ ಆಗಲ್ಲ. ನಮ್ಮದು ಹೈಕಮಾಂಡ್ ಇರುವ ಪಕ್ಷ ಎಲ್ಲವನ್ನೂ ಹೈಕಮಾಂಡ್ ನವರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.


Related Articles

Back to top button