Kannada NewsLatestPolitics

*ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ*

ಪ್ರಗತಿವಾಹಿನಿ ಸುದ್ದಿ: ತೀವ್ರ ವಿವಾದಕ್ಕೆ ಕಾರಣವಗಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚನ ವಿಚಾರ ವಾಗಿ ಕೊನೆಗೂ ಸರ್ಕಾರ ಷರತ್ತುಬದ್ಧ ನುಮತಿ ನೀಡಿದೆ.

ಚಿತ್ತಾಪುರ ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ ಎಂದು ಎಜಿ ಶಶಿಕಿರಣ ಶೆಟ್ಟಿ ಕಲಬುರಗಿ ಹೈಕೋರ್ಟ್ ಪೀಠಕ್ಕೆ ತಿಳಿಸಿದ್ದಾರೆ. ಪಥಸಂಚಲನದಲ್ಲಿ 300 ಕಾರ್ಯಕರ್ತರು ಹಾಗೂ ೨೫ ಜನ ಬ್ಯಾಂಡ್ ವಾದಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಒಂದು ಬಾರಿಯ ಅವಕಾಶವಾಗಿ ಸರ್ಕಾರ ಪಥಸಂಚಲನಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ನ್ಯಾಯಾಲಯ, 25 ಜನ ಬ್ಯಾಂಡ್ ಬಾದಕರನ್ನು ಹೆಚ್ಚಿಸಿ 50 ಜನ ಬ್ಯಾಂಡ್ ಬಾದಕರಿಗೆ ಅವಕಾಶ ನೀಡಲು ಸೂಚಿಸಿದೆ. ಈ ಹಿನ್ನೆಲೆಯ;ಲ್ಲಿ ನವೆಂಬರ್ 16ರಂದು ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಯಲಿದ್ದು, ಒಟ್ಟು 350 ಜನರು ಭಾಗವಹಿಸಲಿದ್ದಾರೆ.

Home add -Advt


Related Articles

Back to top button