Politics

*ಕರ್ನಾಟಕವು ಸಿಡಿ, ಪೆನ್‌ಡ್ರೈವ್ ಕಾರ್ಖಾನೆ ಆಗುತ್ತಿದೆ: ಸಚಿವ ರಾಜಣ್ಣ*

ಪ್ರಗತಿವಾಹಿನಿ ಸುದ್ದಿ: ಹನಿಟ್ರ್ಯಾಪ್ ತಂಡದಲ್ಲಿ ಸುಮಾರು 48 ಜನರಿದ್ದು, ಅವರಲ್ಲಿ ಸಾಕಷ್ಟು ನಾಯಕರ ಸಿಡಿ, ಪೆನ್ ಡ್ರೈವ್‌ಗಳು ಇವೆ ಎಂದು ವಿಧಾನಸಭೆ ಕಲಾಪದಲ್ಲಿ ಸಚಿವ ಕೆ.ಎನ್.ರಾಜಣ್ಣ ಇಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹನಿಟ್ರ್ಯಾಪ್‌ನಲ್ಲಿ ತುಮಕೂರಿನ ಪ್ರಭಾವಿ ಸಚಿವರು ಸಿಲುಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲಿ ನಾನು, ಪರಮೇಶ್ವರ್ ಅವರು ಇದ್ದೀವಿ. ಸುಮ್ಮನೇ ಯಾಕೆ ಅಂತಾ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಗೃಹ ಸಚಿವರಿಗೆ ಲಿಖಿತವಾಗಿ ದೂರು ನೀಡುವೆ. ಹನಿಟ್ರ್ಯಾಪ್‌ಗೆ ಕಡಿವಾಣ ಹಾಕಬೇಕು. ಹನಿಟ್ರ್ಯಾಪ್‌ಗೆ ಒಳಗಾದವರು ಎನ್ನಲಾದ ಕೆಲವರು ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಕೇವಲ ರಾಜ್ಯದ ರಾಜಕೀಯ ನಾಯಕರಲ್ಲ. ರಾಷ್ಟ್ರಮಟ್ಟದ ನಾಯಕರೂ ಹನಿಟ್ರ್ಯಾಪ್ ಗಾಳಕ್ಕೆ ಬಿದ್ದಿದ್ದಾರೆ ಎಂದರು.

ಕರ್ನಾಟಕವು ಸಿಡಿ, ಪೆನ್‌ಡ್ರೈವ್ ಕಾರ್ಖಾನೆ ಆಗುತ್ತಿದೆ ಎಂಬ ಅಪವಾದ ಕೇಳಿಬರುತ್ತಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು.

Home add -Advt

Related Articles

Back to top button