Film & Entertainment

*ಜೈಲಿನಿಂದ ಬಿಡುಗಡೆಯಾದ ಮಡೆನೂರು ಮನು: ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಸಹ ಕಲಾವಿದೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Home add -Advt

ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾದ ನಟ ಮಡೆನೂರು ಮನು, ಕನ್ನಡ ಚಿತ್ರರಂಗದ ಖ್ಯಾತನಾಮರಿಗೆ ಅಗೌರವವಾಗಿ ಮಾತನಾಡಿದ್ದ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಡಿಯೋ ವೈರಲ್ ಮೂಲಕ ನನ್ನ ನಾಶ ಮಾಡಿದ್ದಾರೆ. ಆದರೆ ಆ ಆದಿಯೋ ನನ್ನದಲ್ಲ ಎಂದು ಹೇಳಿದ್ದಾರೆ.

ನನ್ನ ಮೂರು ವರ್ಷಗಳ ಶ್ರಮ ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಎನ್ನುವಾಗ ಹೀಗೆ ಮಾಡಿದ್ದಾರೆ. ಐದಾರು ಜನರು ಸೇರಿಕೊಂಡು ನನ್ನ ಮೇಲೆ ಪ್ಲಾನ್ ಮಾಡಿ ಆರೋಪ ಮಾಡಿದ್ದಾರೆ. ಸಾಕಷ್ಟು ಅಡೆತಡೆಗಳ ನಡುವೆಯೂ ಸಿನಿಮಾ ರಿಲೀಸ್ ಆಗಿದೆ. ನನ್ನ ವಿರುದ್ಧ ಪ್ರತಿ ಹಂತದಲ್ಲಿಯೂ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.

ಅತ್ಯಾಚಾರ ಕೇಸ್ ನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.


Related Articles

Back to top button