Latest

14 ಅಡಿ ಉದ್ದದ ಕಾಳಿಂಗಸರ್ಪ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಶಿರಸಿ:

ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಸುಮಾರು 14 ಅಡಿ ಉದ್ದ ಹಾಗೂ 15 ಕೆಜಿ ತೂಕವಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.

Home add -Advt

ದೇವನಳ್ಳಿಯ ಬಡಿಯಾ ಮರಾಠಿ ಕುಂಬಾರಕುಳಿ ಅವರ ಮನೆಯ ಅಂಗಳಕ್ಕೆ ಬ್ರಹತ್ ಕಾಳಿಂಗ ಸರ್ಪವೊಂದು ಬಂದಿತ್ತು. ಶಿರಸಿಯ ಉರಗತಜ್ಞ ಮನೋಹರ ನಾಯರ್ ಸಹಾಯದಿಂದ ಮನೆಯಲ್ಲಿದ್ದ ಹಾವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟರು.ಈ ಹಾವು ಕಳೆದ ಐದಾರು ದಿನಗಳಿಂದ ದೇವನಳ್ಳಿ ಭಾಗದ ಹಲವೆಡೆ ಕಾಣಿಸಿಕೊಂಡು ಗ್ರಾಮದ ಜನರಲ್ಲಿ ಭಯದ ವಾತಾವರಣ ಹುಟ್ಟಿಸಿತ್ತು.

ಅರಣ್ಯ ಇಲಾಖೆಯ ವಿ.ಟಿ. ನಾಯ್ಕ ಹಾಗೂ ಹನುಮಂತ ಶಕುನವಳ್ಳಿ ಸಹಕಾರದಿಂದ ಉರಗತಜ್ಞ ಮನೋಹರ್ ನಾಯರ್ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟರು.

Related Articles

Back to top button