Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಮಹಿಳೆ ಹತ್ಯೆ ಪ್ರಕರಣ: ತಾಯಿ-ಮಗಳು-ಮಗ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಪಾರ್ಟ್ ಮೆಂಟ್ ಗೆ ನುಗ್ಗಿ ಮಹಿಳೆಯೊಬ್ಬರನ್ನು ಹತ್ಯೆಗೈದು ದುಷ್ಕರ್ಮಿಗಳು ಪಾರಾರುಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಾಯಿ-ಮಗಳು- ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಏ.೨೨ರಂದು ಬೆಳಗಾವಿಯ ಗಣೇಶ ಪುರದ ಅಪಾರ್ಟ್ ಮೆಂಟ್ ನಲ್ಲಿ ಅಂಜನಾ ದಡ್ಡೀಕರ್ ಎಂಬ ಮಹಿಳೆಯ ಹತ್ಯೆಯಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿ ಬಾಂದೇಕರ್, ಮಗಳು ಸುಹಾನಿ ಬಾಂದೇಕರ್ ಹಾಗೂ ಜ್ಯೋತಿಯ ಅಪ್ರಾಪ್ತ ಮಗನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 15 ಸಾವಿರ ಸಾಲದ ಹಣ ವಾಪಾಸ್ ಕೊಡುವಂತೆ ಹೇಳಿದ್ದಕ್ಕೆ ತಾಯಿ-ಮಗಳು-ಅಪ್ರಾಪ್ತ ಮಗ ಸೇರಿ ಮಹಿಳೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ಹಾಗೂ ತನಿಖೆ ದಾರಿ ತಪ್ಪಿಸಲು ಕೊಲೆ ಬಳಿಕ ಮಹಿಳೆಯ ಚಿನ್ನಾಭರಣ ಕದ್ದು ಪರರೈಯಾಗಿದ್ದಾಗಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button