Kannada NewsKarnataka NewsLatest

*ಕಸ್ತೂರಿ ರಂಗನ್ ವರದಿ: ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಧಾರಕ್ಕೆ‌‌ ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ವಿರೋಧ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಸುವ ಬಗ್ಗೆ ತೀರ್ಮಾನಿಸಿರುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಎಂದು‌‌ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಈ ವರದಿ ಜಾರಿಯಿಂದ ಪಶ್ಚಿಮ ಘಟ್ಟಗಳನ್ನು ಒಳಗೊಂಡ 10 ಜಿಲ್ಲೆಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಮೇಲೆ ಅಗಾಧ ದುಷ್ಪರಿಣಾಮ ಬೀರಲಿದ್ದು, ಮಲೆನಾಡು ಹಾಗೂ ಕರಾವಳಿಯಂಚಿನ ನಿವಾಸಿಗಳಲ್ಲಿ ಆತಂಕ ಮಣೆ ಮಾಡಿದೆ ಎಂದರು.

ಈ ವರದಿಯನ್ನು ಹಿಂದಿನ ಕಾಂಗ್ರೇಸ್‌ ಸರ್ಕಾರ ತಿರಸ್ಕರಿಸಿತ್ತು. ಈ ಹಿಂದಿನ ಸರ್ಕಾರದ ನೇತೃತ್ವದಲ್ಲಿ ರಾಜ್ಯದ ಸಂಸದರು ಹಾಗೂ ಶಾಸಕರನ್ನೊಳಗೊಂಡ ನಿಯೋಗವು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವರವನ್ನು ಭೇಟಿಯಾಗಿ ಈ ವರದಿಯ ಸಾಧಕ ಭಾಧಕಗಳ ಬಗ್ಗೆ ಅರಿವು ಮೂಡಿಸಿದ್ದರು ಹಾಗೂ ಯಥಾಸ್ಥಿತಿಯಲ್ಲಿ ಡಾ. ಕೆ. ಕಸ್ತೂರಿ ರಂಗನ ವರದಿಯನ್ನು ಜಾರಿಗೊಳಸಲು ಸಾಧ್ಯವಿಲ್ಲ ಎಂದು ಸರ್ಕಾರ ಕಟ್ಟಾಜ್ಞೆ ಹೊರಡಿಸಿತ್ತು. ಆದರೆ ಇಂದಿನ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ಈ ವರದಿಯ ಕುರಿತು ಸಂಪೂರ್ಣ ಅಧ್ಯಯನ ಮಾಡಿಕೊಳ್ಳಬೇಕು. ಮಲೆನಾಡಿನ ಪ್ರದೇಶದಿಂದ ಬಂದಿರುವ ನಮಗೂ ಸಹ ಅರಣ್ಯ ರಕ್ಷಣೆಯ ಬಗ್ಗೆ ಅತೀವ ಪ್ರೀತಿ ಹಾಗೂ ಕಾಳಜಿ ಇದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಬದುಕು ಕಟ್ಟಕೊಂಡಿರುವ ಅನೇಕ ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ಪರಂಪರೆಗಳು ಈ ವರದಿಯಿಂದ ನಶಿಸಿಹೋಗಲಿದೆ.

ಅರಣ್ಯ ಸಚಿವರು ಸಹಸ್ರಾರು ಬಡ ಕುಟುಂಬಗಳ ಜೀವನವನ್ನು ಸರ್ವನಾಶ ಮಾಡುವ ಈ ವರದಿಯನ್ನು ತರಾತುರಿಯಲ್ಲಿ ಜಾರಿಗೊಳಸದೇ ಪಶ್ಚಿಮಘಟ್ಟಗಳನ್ನು ಒಳಗೊಂಡಿರುವ ಪ್ರದೇಶಗಳ ಶಾಸಕರು ಹಾಗೂ ಸಂಸದರೊಂದಿಗೆ ಈ ವರದಿಯ ಸಾಧಕ – ಭಾಧಕಗಳ ಕುರಿತು ವಿಸ್ತ್ರತವಾಗಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಬೇಕು. ಹೀಗಾಗಿಯೂ ಈ ವರದಿಯನ್ನು ಜಾರಿಗೊಳಸುವುದಾದಲ್ಲಿ ಎಲ್ಲಾ ಹೋರಾಟಕ್ಕೆ ನಾವು ಸಿದ್ಧವಾಗಿದ್ದು, ಶಾಸಕರು ಹಾಗೂ ಸಂಸದರುಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button