Latest

ಕೊವಿಡ್ ಸೋಂಕಿತೆ ಮೇಲೆ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಕೋರೊನಾ ಸೋಂಕಿತೆ ಯುವತಿ ಮೇಲೆ ಆಂಬುಲೆನ್ಸ್ ಚಾಲಕನೇ ಅತ್ಯಾಚಾರವೆಸಗಿರುವ ಘಟನೆ ಕೇರಳದ ಪಟನವಿಟ್ಟಾ ಜಿಲ್ಲೆಯಲ್ಲಿ ನಡೆದಿದೆ.

ಕೋವಿಡ್ ಕೇಂದ್ರಕ್ಕೆ ದಾಖಲಿಸಲು ಆಂಬುಲೆನ್ಸ್ ನಲ್ಲಿ ಕೊರೊನಾ ಸೋಂಕಿತೆಯನ್ನು ಸಾಗಿಸಲಾಗುತಿತ್ತು. ಈ ವೇಳೆ ಆಂಬುಲೆನ್ಸ್ ನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಚಾಲಕ 19 ವರ್ಷದ ಸೋಂಕಿತೆ ಮೇಲೆ ಅತ್ಯಾಚಾರವೆಸಗಿದ್ದಾನೆ.

ಕೃತ್ಯದ ಬಳಿಕ ಸಂತ್ರಸ್ತ ಸೋಂಕಿತೆಯನ್ನು ಕೊವಿಡ್ ಕೇಂದ್ರಕ್ಕೆ ತಂದು ಬಿಟ್ಟಿದ್ದಾನೆ. ಪ್ರಸ್ತುತ ಆರೋಪಿ ಆಂಬುಲೆನ್ಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button