ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅದ್ಭುತ ಸ್ಮರಣಶಕ್ತಿಗೆ ಹೆಸರಾಗಿರುವ ನಡೆದಾಡುವ ಗಣಕ ಯಂತ್ರ ಎಂದೇ ಖ್ಯಾತರಾದ ಅಥಣಿ ತಾಲೂಕಿನ ಬಸವರಾಜ ಉಮರಾಣಿ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಸತ್ಕರಿಸಿದರು.
ಬಸವರಾಜ ಅವರು ಹುಟ್ಟು ಅಂಧರಾಗಿದ್ದು ತಮ್ಮ ಅತ್ಯುನ್ನತ ಬುದ್ದಿ ಸಂಪಾದನೆಯೊಂದಿಗೆ ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಹೊರದೇಶಗಳಲ್ಲಿಯೂ ಕೂಡ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇತ್ತಿಚಿಗೆ ಇವರು ದುಬೈ (ಅರಬ್ ಯುನೈಟೆಡ್ ಎಮಿರೇಟ್ಸ್) ಗೆ ಹೋಗಿ ಅಲ್ಲಿನ ರಾಜ ಶೇಖ್ ಮೊಹಮ್ಮದ್ ಅವರನ್ನು ಭೇಟಿ ಮಾಡಿ ಅವರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿ ಅವರಿಂದ ಸನ್ಮಾನಿತರಾಗಿದ್ದಾರೆ.
ಇಂದು ತಮ್ಮನ್ನು ಭೇಟಿಯಾದ ಬಸವರಾಜ ಉಮರಾಣಿಯವರನ್ನು ಸನ್ಮಾನಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈ ಅದ್ಬುತ ಪ್ರತಿಭೆಯೊಂದಿಗೆ ಕೆಲ ಕಾಲ ಕುಶಲೋಪರಿಯನ್ನು ನಡೆಸಿ ಅವರ ಬಗ್ಗೆ ಇನ್ನಷ್ಟು ತಿಳಿದುಕೊಂಡು ಪ್ರತಿಭೆಯನ್ನು ಹೃದಯಪೂರ್ವಕವಾಗಿ ಗೌರವಿಸಿದ್ದೇನೆ. ಅವರ ಜೊತೆ ಕೆಲ ಸಮಯವನ್ನು ಕಳೆದಿದ್ದು ಮನಸ್ಸಿಗೆ ಖುಷಿ ಎನಿಸಿತು, ಮುಂಬರುವ ದಿನಗಳಲ್ಲಿ ಏನಾದರೂ ಸಹಾಯ ಬೇಕಾದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಬಸವರಾಜ ಉಮರಾಣಿಯವರ ಜೊತೆಗೆ ಇವರ ಕಲಾವಿದ ಸಿದ್ದು ಇಟಗಿ ಕೂಡ ಕಲಾ ಪ್ರದರ್ಶನಮಾಡಿ, ತಮ್ಮ ಕೈಚಳಕದೊಂದಿಗೆ ಹೆಬ್ಬಾಳಕರ್ ಹುಟ್ಟಿದ ದಿನಾಂಕದ ಮೂಲಕ ಕೆಲವೇ ಕ್ಷಣಗಳಲ್ಲಿಅವರ ಭಾವಚಿತ್ರವನ್ನು ಬಿಡಿಸಿ ವಿಸ್ಮಯ ಮೂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ