Belagavi NewsBelgaum News

*ಖರ್ತನಾಕ್ ಕಳ್ಳಿಯರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದೆ 

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆಕ್ಟಿವ್ ಆಗಿದ್ದ ಕಳ್ಳಿಯರ ಖರ್ತನಾಕ್ ಗ್ಯಾಂಗ್ ಅನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಬಂಧಿಸಿದ್ದಾರೆ. 

ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ, ಮೂವರು ಖರ್ತನಾಕ್ ಕಳ್ಳಿಯರ ಅರೆಸ್ಟ್ ಮಾಡಲಾಗಿದೆ.‌ ಬೆಳಗಾವಿ ನಗರದ ವಡ್ಡರವಾಡಿ ನಿವಾಸಿ ಅನೀತಾ ಚೌಗಲೆ (58) ನಿಶಾ ಲೊಂಡೆ (25),ಗಿಡ್ಡಿ ಲೊಂಡೆ (35) ಬಂಧಿತರು. ಬಂಧಿತರಿಂದ 12,72,700 ರೂ ಮೌಲ್ಯದ 143 ಗ್ರಾಂ ಚಿನ್ನದ ಒಡವೆ ಜಪ್ತಿ ಮಾಡಲಾಗಿದೆ. 

ಹುಬ್ಬಳ್ಳಿ ಮೂಲದ ಕಾಂಚನ್ ಗೌಡರ ಎಂಬುವರ ಚಿನ್ನದ ಸರ ಕಳ್ಳತನವಾಗಿತ್ತು. ಈ ಬಗ್ಗೆ ಮಾರ್ಕೆಟ್ ‌ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೇಸ್ ದಾಖಲಿಸಿಕೊಂಡ ಮಾರ್ಕೆಟ್ ಪೊಲೀಸರು ಕಳ್ಳಿಯರನ್ನ ಬಂಧಿಸಿ  ಜೈಲಿಗಟ್ಟಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button