Latest

ಕಿತ್ತೂರು ಕರ್ನಾಟಕ ಘೋಷಣೆ ಐತಿಹಾಸಿಕ ದಾಖಲೆ; ಹುಕ್ಕೇರಿ ಶ್ರೀ

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಕರ್ನಾಟಕ ಘೋಷಣೆ ಮಾಡುವುದರೊಂದಿಗೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಕಿತ್ತೂರು ಕರ್ನಾಟಕ ಕೇವಲ ಘೋಷಣೆಯಾಗುವದು ಅಷ್ಟೇ ಅಲ್ಲ ಕಿತ್ತೂರು ಕರ್ನಾಟಕ ಪ್ರಾಧಿಕಾರವು ಕೂಡ ರಚನೆಯಾಗಿ ಎಲ್ಲರ ಮನಸ್ಸಿಗೆ ಸಂತೋಷವನ್ನು ಮುಖ್ಯಮಂತ್ರಿಗಳು ನೀಡಬೇಕು ಎಂದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

ನಗರದ ಹಿರೇಮಠದಲ್ಲಿ ವಿಜಯೋತ್ಸವ ಆಚರಣೆ ಬಳಿಕ ಮಾತನಾಡಿದ ಶ್ರೀಗಳು, ಡಾ.ಎಂ.ಚಿದಾನಂದಮೂರ್ತಿಯವರ ಕನಸು ಇಂದು ನೆನಸಾಗಿದೆ ಅವರಿದ್ದಾಗ ಅದು ಕಲ್ಯಾಣ ಕರ್ನಾಟಕ ಎಂದು ಅವರು ನಮ್ಮೊಂದಿಗಿಲ್ಲ ಆದರೆ ಇವತ್ತು ಕಿತ್ತೂರು ಕರ್ನಾಟಕ ಘೋಷಣೆಯಾಗುವ ಮುಖಾಂತರ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ನಾನು ಭಾವಿಸಿಕೊಳ್ಳುತ್ತೆವೆ ಕಿತ್ತೂರು ಕರ್ನಾಟಕ ಘೋಷಣೆ ಮಾಡಿರುವ ಮುಖ್ಯಮಂತ್ರಿಗಳನ್ನು ಅತೀವ ಸಂತೋಷದಿಂದ ಅಭಿನಂದಿಸುತ್ತೇವೆ ಎಂದು ಹೇಳಿದರು.

Home add -Advt

ಹುಕ್ಕೇರಿ ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ ಅವರು ಮಾತನಾಡಿ ಬಸವರಾಜ ಬೊಮ್ಮಾಯಿ ಅವರು ಇವತ್ತು ಕಿತ್ತೂರು ಕರ್ನಾಟಕ ಘೋಷಣೆ ಮಾಡುವುದರೊಂದಿಗೆ ನಮಗೆ ವಿಶೇಷವಾಗಿರುವ ಸಂತೋಷವನ್ನು ನೀಡಿದ್ದಾರೆ .ಅವರಿಂದ ಇನ್ನೂ ಹೆಚ್ಚು ಕೆಲಸಗಳಾಗಲಿ ನಮ್ಮ ಭಾಗದ ಜನ ಅವರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತಿದ್ದಾರೆ ಎಂದರು.

ನಂತರ ಹುಕ್ಕೇರಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸುಭಾಷ ನಾಯಿಕ, ಗುರುಶಾಂತೇಶ್ವರ ಕಲಾಪೋಷಕ ಸಂಘದ ಅಧ್ಯಕ್ಷ ಶಿವಾನಂದ ಜಿರಲಿ, ಬಿಜೆಪಿ ಧುರೀಣಪರಗೌಡ ಪಾಟೀಲ ,ಹಾಗೂ ಸಮಾಜಸೇವಕ ಸುರೇಶ ಜನರಾಳಿ ,ಚನ್ನಪ್ಪ ಗಜಬರ, ಗೌರೀಶ ಹಂದಿಗುಡಮಠ ಧರಣೇಂದ್ರ ಹಿಮಗೌಡನವರ ಸಂತೋಷ ಮರಡಿ, ಬಸಗೌಡ ಪಾಟೀಲ ಇನ್ನೂ ಅನೇಕರು ಉಪಸ್ಥಿತರಿದ್ದರು.
ಪುನೀತ್ ಪುಣ್ಯಸ್ಮರಣೆ; ಅಭಿಮಾನಿಗಳಿಗಾಗಿ ದೊಡ್ಮನೆಯಿಂದ ಅನ್ನ ಸಂತರ್ಪಣೆ

Related Articles

Back to top button