Belagavi NewsBelgaum NewsKannada NewsKarnataka NewsLatest

*ಕೆಎಲ್ಇ ಆಸ್ಪತ್ರೆ ಪಿಆರ್ ಒ ಶಂಕರ ಪರಸಣ್ಣವರ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಜನಸಂಪರ್ಕಾಧಿಕಾರಿ (ಪಿಆರ್‌ಓ) ಶಂಕರ ಫಕೀರಪ್ಪ ಪರಸಣ್ಣನವರ ಹೃದಯಾಘಾತದಿಂದ ನಿಧನ ಹೊಂದಿದರು.

ಅವರಿಗೆ ೫೬ ವಯಸ್ಸಾಗಿತ್ತು. ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ಶಂಕರ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಅವರ ಅಕಾಲಿಕ ಅಗಲಿಕೆ ಕೆಎಲ್‌ಇ ಆಸ್ಪತ್ರೆಗೆ ಆಘಾತವನ್ನುಂಟು ಮಾಡಿದೆ. ಶಂಕರ್ ನಿಧನಕ್ಕೆ ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲೆಂದು ಕೆಎಲ್‌ಇ ಸಮಸ್ತ ಸಿಬ್ಬಂದಿವರ್ಗದವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

Home add -Advt

Related Articles

Back to top button